ಚಿಕ್ಕಪ್ಪನನ್ನೇ ಕೊಂದ ಪ್ರಕರಣ – ಜ್ಯೂಸ್ ಅಂತ ಹೇಳಿ ಮದ್ಯ ಕುಡಿಸಿದ್ದಕ್ಕೆ ಬರ್ಬರ ಹತ್ಯೆ

Public TV
1 Min Read
Chikkaballapur 1

ಚಿಕ್ಕಬಳ್ಳಾಪುರ: ಚಿಕ್ಕಪ್ಪನನ್ನೇ (Uncle) ಅಣ್ಣನ ಮಗ ಕೊಚ್ಚಿ ಕೊಲೆ (Murder) ಮಾಡಿದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು (Gauribidanur) ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಚಿಕ್ಕಪ್ಪ ಮೋಸದಿಂದ ಮದ್ಯ (Alcohol) ಕುಡಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಅಂದಹಾಗೆ ಸೋಮವಾರ ಬೆಳಗ್ಗೆ ಗೌರಿಬಿದನೂರು ತಾಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ಹಾಲು ತರಲು ಡೈರಿ ಬಳಿ ಬಂದಿದ್ದ ರಾಮಕೃಷ್ಣಪ್ಪನನ್ನು ಆತನ ಅಣ್ಣನ ಮಗ ನಾಗರಾಜು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇದೀಗ ಪೊಲೀಸರ ಬಳಿ ಆರೋಪಿ ಕೊಲೆಯ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

CHIKKABALLAPURA CRIME

ಕೊಲೆಗಾರ ನಾಗರಾಜು ಈ ಹಿಂದೆ ಮದ್ಯವ್ಯಸನಿಯಾಗಿದ್ದು ಕುಟುಂಬಸ್ಥರು ಮದ್ಯಪಾನ ಮುಕ್ತ ಕೇಂದ್ರಕ್ಕೆ ಸೇರಿಸಿ ಮದ್ಯ ಸೇವನೆ ಬಿಡಿಸಿದ್ದರು. ಕಳೆದ 8 ವರ್ಷಗಳಿಂದ ಸಂತೋಷದ ಜೀವನ ಮಾಡಿಕೊಂಡಿದ್ದ ನಾಗರಾಜುಗೆ ರಾಮಕೃಷ್ಣಪ್ಪ ಕೊಲೆಯಾದ ಹಿಂದಿನ ದಿನ ಜ್ಯೂಸ್ (Juice) ಬಾಟಲಿಗೆ ಮದ್ಯ ಬೆರೆಸಿ ನೀಡಿದ್ದ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿ ಗ್ರೇಟ್ ಆಪರೇಷನ್ – 17 ದಿನಗಳ ಬಳಿಕ ಸಾವು ಗೆದ್ದ 41 ಕಾರ್ಮಿಕರು

ಬಾಟಲಿಯಲ್ಲಿರುವುದು ಜ್ಯೂಸ್ ಎಂದು ನಂಬಿಸಿ ನಾಗರಾಜುಗೆ ಮೋಸದಿಂದ ಮದ್ಯ ಕುಡಿಸಿದ್ದರಿಂದ ಅಮಲೇರಿದ ಆತ ರಾತ್ರಿ ಮನೆಯಲ್ಲಿ ಹೆಂಡತಿ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ಮರುದಿನ ಬೆಳಗ್ಗೆ ನಡೆದ ಘಟನೆ ಬಗ್ಗೆ ಸಾಕಷ್ಟು ವಿಚಲಿತನಾದ ನಾಗರಾಜು ಚಿಕ್ಕಪ್ಪ ರಾಮಕೃಷ್ಣಪ್ಪ ಹಾಲು ತರಲು ಬರುವುದನ್ನೇ ಕಾದು ಕುಳಿತು ಬಳಿಕ ಬರ್ಬರ ಹತ್ಯೆ ನಡೆಸಿ ಪರಾರಿಯಾಗಿದ್ದ.

ಘಟನೆ ನಂತರ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾನೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

Share This Article