ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ಸಿಖ್ ಸಮುದಾಯದವರು ದೂರು ದಾಖಲಿಸಿದ್ದಾರೆ.
‘ಝೀರೋ’ ಚಿತ್ರದ ಟ್ರೇಲರ್ ನಲ್ಲಿ ಶಾರೂಕ್ ‘ಕಿರ್ ಪನ್’ ಧರಿಸಿದ್ದಕ್ಕೆ ದೆಹಲಿಯ ಸಿಖ್ ಗುರುದ್ವಾರ ಮ್ಯಾನೇಜ್‍ಮೆಂಟ್ ಕಮಿಟಿಯ ಜನರಲ್ ಸೆಕ್ರೆಟರಿ ಮಂಜಿದರ್ ಸಿಂಗ್ ಸಿರಸಾ ಶಾರೂಕ್ ಹಾಗೂ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
Advertisement
ಸಿಖ್ ಸಮುದಾಯದವರು ಝೀರೋ ಚಿತ್ರದ ಟ್ರೈಲರ್ ತಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡುತ್ತಿದ್ದರು. ಹಾಗಾಗಿ ದೆಹಲಿಯ ನಾರ್ತ್ ಆವೆನ್ಯೂ ಪೊಲೀಸ್ ಠಾಣೆಯಲ್ಲಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಾಗಿದೆ.
Advertisement
I have written a letter to actor of @Zero21Dec @iamsrk & director @aanandlrai to withdraw the objectionable scene and poster showing Kirpaan as ordinary dagger
Filed a complaint as well as this promotion hurts Sikh sentiments pic.twitter.com/yuTpVPLfij
— Manjinder Singh Sirsa (@mssirsa) November 5, 2018
Advertisement
ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರಾ ಕಿರ್ ಪನ್ ಧರಿಸಿದ್ದಾರೆ. ವಿಶ್ವಾದ್ಯಂತ ಸಿಖ್ ಸಮುದಾಯದವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಖ್ ಸಂಪ್ರದಾಯದ ಪ್ರಕಾರ ಗತ್ರ ಕಿರ್ ಪನ್ ಕೇವಲ ಅಮ್ರಿತ್‍ದರಿ ಸಿಖ್ ಜನರು ಧರಿಸುವುದು. ಹಾಗಾಗಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಿಸಬೇಕೆಂದು ಪೊಲೀಸರಿಗೆ ಮಂಜಿದರ್ ಒತ್ತಾಯಿಸಿದ್ದಾರೆ.
Advertisement
ಝೀರೋ ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರ ಕಿರ್ ಪನ್ ಧರಿಸಿದ ಕಾರಣ ವಿಳಂಬ ಮಾಡದೇ ಈ ಟ್ರೇಲರ್ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕೆಂದು ಮಂಜಿದರ್ ಸಿಂಗ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟಿ ಶ್ರೀದೇವಿ, ರಾಣಿ ಮುಖರ್ಜಿ, ಕಾಜೋಲ್, ಅಲಿಯಾ ಭಟ್, ಅಭಯ್ ಡಿಯೋಲ್, ಆರ್. ಮಾಧವನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರೂಕ್‍ಗೆ ನಾಯಕಿಯಾಗಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ನಟಿಸಿದ್ದು, ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv