ಉಡುಪಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಮೇಲೆ ಅವಧೂತ ವಿನಯ್ ಗುರೂಜಿ ಬೆಂಬಲಿಗರು ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಕೇಸ್ ದಾಖಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಿಸಿ ನಾಲ್ವರನ್ನು ದಸ್ತಗಿರಿ ಮಾಡಿದ್ದೇವೆ. ರತ್ನಾಕರ್ ಪೂಜಾರಿ, ತಾನು ನಟ ಸುದೀಪ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ವಿನಯ್ ಗುರೂಜಿ, ಸುದೀಪ್ ಅವರ ಬಗ್ಗೆ ಲೂಸ್ ಟಾಕ್ ಮಾಡಿದ್ದಾರೆ ಎಂಬುದು ರತ್ನಾಕರ ಅವರ ಆರೋಪ. ಇದರಿಂದ ಕೊಪಗೊಂಡ ಅವರು, ಗುರೂಜಿ ವಿರುದ್ಧ ಪೋಸ್ಟ್ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ. ರತ್ನಾಕರ್ ಪೂಜಾರಿಯ ಕೈ, ಕಾಲು ಮುರಿದಿದೆ ಎಂದು ಎಂದು ಎಸ್‍ಪಿ ಮಾಹಿತಿ ನೀಡಿದರು. ಇದನ್ನೂ ಓದಿ: ವಿನಯ್ ಗುರೂಜಿ ಬೆಂಬಲಿಗರ ಗೂಂಡಾಗಿರಿ- ಕಿಚ್ಚನ ಅಭಿಮಾನಿ ಮೇಲೆ ಹಲ್ಲೆ
ನಾಲ್ವರು ಆರೋಪಿಗಳಾದ ಗುರುರಾಜ್, ಸಂತೋಷ್, ರವಿರಾಜ್, ಪ್ರದೀಪ್ ದಸ್ತಗಿರಿ ಮಾಡಿದ್ದೇವೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ. ಘಟನೆಯಲ್ಲಿ 8 ರಿಂದ 10 ಆರೋಪಿಗಳು ಇದ್ದಾರೆ ಎಂದು ದೂರುದಾರ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರ 2 ತಂಡ ರಚನೆ ಮಾಡಿ ಹುಡುಕಾಟ ಮಾಡುತ್ತಿದ್ದೇವೆ ಎಂದು ಉಡುಪಿ ಎಸ್‍ಪಿ ನಿಶಾ ಜೇಮ್ಸ್ ಹೇಳಿದ್ದಾರೆ. ರತ್ನಾಕರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ 15 ಮಂದಿ ರಾಡ್‌ನಿಂದ ಹಲ್ಲೆ ಮಾಡಿದ್ರು- ಸುದೀಪ್ ಅಭಿಮಾನಿ
ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಚಾರ ಚರ್ಚೆಯಾದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸ್ಕ್ರಾಲ್ ಮಾಡಿ ಮುಂದಕ್ಕೆ ಹೋಗಬೇಕು. ಈ ಘಟನೆಯಲ್ಲಿ ಯುವಕರೇ ಶಾಮೀಲಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗೆ ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿಶಾ ಅವರು ಕಿವಿಮಾತು ಹೇಳಿದ್ದಾರೆ.