ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮರ ಬಗ್ಗೆ ಪ್ರತಾಪ್ ಸಿಂಹ ಬೆಂಬಲಿಗರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸಂಜಯನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಲಿಂಗಾಯತ ಪ್ರದೇಶ ಸಂಘದ ಕವನ ಅನ್ನೋರು ಈ ಕುರಿತು ದೂರು ನೀಡಿದ್ದಾರೆ. ದೂರಿನಂತೆ ಪೊಲೀಸರು ಪೋಸ್ಟ್ ಕಾರ್ಡ್ ಕನ್ನಡ ಎಡಿಟರ್ ಹಾಗೂ ಐ ಸಪೋರ್ಟ್ ಪ್ರತಾಪ್ ಸಿಂಹ, ಐ ಸಪೋರ್ಟ್ ಫೇಸ್ ಬುಕ್ ಪೇಜ್ ಅಡ್ಮಿನ್ ಗಳ ವಿರುದ್ದ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
Advertisement
Advertisement
ಇದೇ ವೇಳೆ ಪೋಸ್ಟ್ ಕಾರ್ಡ್ ಕನ್ನಡ ವೆಬ್ ಸೈಟ್ ಬ್ಯಾನ್ ಮಾಡುವಂತೆ ಕವನ ಆಗ್ರಹಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡೋದಾಗಿ ಅವರು ಎಚ್ಚರಿಕೆ ನಿಡಿದ್ದಾರೆ.
Advertisement
ಇದನ್ನೂ ಓದಿ: ಓಬವ್ವ, ಕಿತ್ತೂರು ರಾಣಿ ಬಗ್ಗೆ ಪ್ರಕಟವಾದ ಪೋಸ್ಟಿಗೂ ನನಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಿಡಿದೆದ್ದಂತಹ ಸಿಡಿಲ ಮರಿ ರಾಣಿ ಕಿತ್ತೂರು ಚೆನ್ನಮ್ಮನ ಬಗ್ಗೆ ಅವಹೇಳಕಾರಿ ಆಗಿ ಪೋಸ್ಟ್ ಬರುತ್ತೆ. ಆದ್ರೆ ಪ್ರತಾಪ್ ಸಿಂಹ ಅವರು ಇದು ನಾನು ಮಾಡಿದ್ದಲ್ಲ. ನಾನು ಇತಿಹಾಸವನ್ನು ತಿಳಿದುಕೊಂಡಿದ್ದೀನಿ. ನನ್ನ ಬೆಂಬಲಿಗರು ಈ ತರ ಮಾಡಿದ್ದಾರೆ ಅಂತಾ ಹೇಳ್ತಾ ಇದ್ದಾರೆ. ಇದು ಬಿಜೆಪಿ ಸಂಸ್ಕೃತಿ ಹಾಗೂ ಬಿಜೆಪಿ ನಾಯಕರ ಫಾಲೋವರ್ಸ್ ಗಳಿಗೆ ಕನ್ನಡಿ ಹಿಡಿದಿದೆ. ಯಥಾ ರಾಜ ತಥಾ ಪ್ರಜೆ. ನಾಯಕ ಹೆಂಗಿರ್ತಾನೋ, ಹಿಂಬಾಲಕರು ಕೂಡ ನಿಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುತ್ತಾರೆ ಅಂದ್ರು.
ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆಯವರು ಬೂಟು ನೆಕ್ಕುವಂತಹ ಸಂಸ್ಕೃತಿ ಬಗ್ಗೆ ಹೇಳಿದ್ರು. ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಮುಖ್ಯಮಂತ್ರಿಗಳು ಸೆಗಣಿ ತಿಂದು ಬಂದಿದ್ರು ಅಂತ ಹೇಳಿದ್ರು. ನಾಲ್ಕೈದು ತಿಂಗಳ ಹಿಂದೆ ಗುಂಡ್ಲು ಪೇಟೆ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಗೀತಾ ಮಹದೇವ ಪ್ರಸಾದ್ ವಿರುದ್ಧ ಹಾಲು-ತುಪ್ಪ ಆರೋಕ್ಕಿಂತ ಮುಂಚೆ ಅಧಿಕಾರ ದಾಹ ಬಂದಿದೆ ಅಂತ ಹೇಳಿದ್ದರು. ಇವರ ಇಂತಹ ಹೇಳಿಕೆಗಳು ಬಿಜೆಪಿ ಸಂಸ್ಕೃತಿಯನ್ನು ಎತ್ತಿತೋರಿಸುತ್ತದೆ ಅಂತ ಕಿಡಿಕಾರಿದ್ರು.
ಬಾಯಿ ತೆಗೆದ್ರೆ ಬರೀ ರಾಮ ರಾಮ ರಾಮ ಅನ್ನೋ ನೀವೆಲ್ಲರೂ ರಾವಣನ ಕೆಲಸ ಮಾಡುತ್ತಿದ್ದೀರಾ. ದೇಶದಲ್ಲಿ ಸಂಸ್ಕೃತಿ ಅಂದ್ರೆ ಬರೀ ಬಿಜೆಪಿಯ ಬಳುವಳಿ ಅಂತಾ ಹೇಳ್ತಾ ಇರೋ ಇಂದು ಸಂಸ್ಕೃತಿಯನ್ನು ರಾಜ್ಯದ ಜನರಿಗೆ ತೋರಿಸ್ತಾ ಇದ್ದೀರಾ. ನಿಮಗೆಲ್ಲರಿಗೂ ಒಳ್ಳೆಯದಾಗಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರುಗಳಿಗೆ ತಕ್ಕ ಶಾಸ್ತಿ ಆಗುತ್ತೆ ಅಂತ ಹೇಳಿದ್ರು.
ಕರ್ನಾಟಕ ರಾಜ್ಯದ ಸ್ವಾಭಿಮಾನಿ ಮಹಿಳಾ ಮಣಿಗಳಿಗೆ ನೀವು ಇಂದು ಅಗೌರವ ತೋರಿದ್ದೀರಿ. ಹೀಗಾಗಿ ನಿಮಗೆ ಶಾಪ ಕಾಡುತ್ತೆ. ಬಿಜೆಪಿಯ ಕುಲಕ್ಕೆ ಮಹಿಳೆಯ ಶಾಪ ಖಂಡಿತಾ ಕಾಡುತ್ತೆ ಅಂತ ಅತ್ಯಂತ ಕಠಿಣ ಶಬ್ದದಲ್ಲಿ ಅವರು ನಿಂದಿಸಿದ್ರು.
https://www.youtube.com/watch?v=oIwYWxoSjNA