ಮಂಗಳೂರು: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಸ್ ದಾಖಲಾಗಿದೆ.
ಇನ್ಸ್ ಪೆಕ್ಟರ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರ ವಿರುದ್ಧ ಮಂಗಳೂರಿನ ಕದ್ರಿ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.
Advertisement
ಏನಿದು ಘಟನೆ: ಮಂಗಳೂರು ಚಲೋ ರ್ಯಾಲಿಯ ಸಂದರ್ಭದಲ್ಲಿ ಪೊಲೀಸರು ಕದ್ರಿ ಗೋರಕ್ಷನಾಥ ಸಭಾಂಗಣದಲ್ಲಿ ಕಾರ್ಯಕರ್ತರನ್ನು ಕೂಡಿ ಹಾಕಿದ್ದರು. ಕೇಸ್ ಬುಕ್ ಮಾಡುವ ನೆಪದಲ್ಲಿ ಕೂಡಿ ಹಾಕಿ, ಬಿಡುಗಡೆ ಮಾಡಲು ತಡಮಾಡಿದ್ದಕ್ಕೆ ಆಕ್ರೋಶಗೊಂಡ ಸಂಸದರು ಸ್ಥಳಕ್ಕೆ ತೆರಳಿ ಕದ್ರಿ ಇನ್ ಸ್ಪೆಕ್ಟರ್ ಮಾರುತಿ ನಾಯಕ್ ಗೆ ಅವಾಜ್ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Advertisement
ಮಾರುತಿ ನಾಯಕ್ ಮೊಬೈಲ್ ಕರೆ ಮಾಡಲು ಮುಂದಾದಾಗ ಕಟೀಲು, ನಿಮ್ ಚಾರ್ಜ್, ನಮ್ಮ ಚಾರ್ಜ್ ಅಲ್ಲ. ಸಹಿ ಮಾಡಿ. ಜೋರು ಮಾಡಿದ್ರೆ ಈಗಲೇ ಬಂದ್ ಕಾಲ್ ಕೊಡ್ತೀನಿ, ನೀವೇ ಅನುಭವಿಸಬೇಕು. ಏನು ತಿಳ್ಕೊಂಡಿದ್ದಾರೆ ಕಮಿಷನರ್. ನೀವು ಏನು ತಿಳ್ಕೊಂಡಿದ್ದೀರಾ..? ಆಟ ಆಡ್ತೀರಾ ನಮ್ಮತ್ರ? ನಮ್ಮ ಸಂಘಟನೆಯವರು ತೆಗೆದು ಬಿಸಾಕ್ತಾರೆ. ಕೊಡ್ರಿ ಈಚೆ. ಇನ್ನು ಅರ್ಧ ಗಂಟೆ ಲಾಕ್ ಮಾಡಿದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಅನುಭವಿಸಬೇಕು. ಕೊಡ್ರಿ ಈಚೆ. ಇಲ್ಲಾಂದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಜವಾಬ್ದಾರಿ ನಿನ್ನ ಹೆಸರಲ್ಲೇ ಬಂದ್ ಕಾಲ್ ಕೊಡ್ತೇನೆ. ಏನ್ ತಿಳ್ಕೊಂಡಿದ್ದಿ..? ಏನ್ ನಮ್ದು..? ಅರ್ಧ ಗಂಟೆ ಆಯ್ತು ಫೋನ್ ಮಾಡಿ ಎಂದು ಹೇಳಿ ದರ್ಪದಲ್ಲಿ ಮಾತನಾಡಿದ್ದರು.
Advertisement
https://www.youtube.com/watch?v=z0V_F1q5DDM