ಗದಗ: ಕಾರಿನ ಮೇಲೆ ಪಾಕ್ ಧ್ವಜವನ್ನು (Pakistan Flag) ಪ್ರದರ್ಶಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಪ್ರಾಪ್ತನ ವಿರುದ್ಧ ಗದಗ ಶಹರ ಪೊಲೀಸರು (Gadag Police) ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.
ಈದ್‌ಮಿಲಾದ್ (Eid Milad) ಹಬ್ಬದಂದು ಅಪ್ರಾಪ್ತ ಬಾಲಕ ಇನ್ಸ್ಟಾಗ್ರಾಮ್‌ನಲ್ಲಿ ಕಾರಿನ ಬೋನೆಟ್ ಮೇಲೆ ಪಾಕಿಸ್ತಾನ ಧ್ವಜವನ್ನು ಹಾಕಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದ. ಸಮಾಜದ ಐಕ್ಯತೆಗೆ ಧಕ್ಕೆ ತರುವ ಹಾಗೂ ಸೌಹಾರ್ದತೆಗೆ ಭಾದಕವಾಗುವ ಕೃತ್ಯವನ್ನು ಎಸಗಿದ್ದಾನೆ ಎಂದು ಅಪ್ರಾಪ್ತ ಬಾಲಕನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋರ್ಟ್ ಆದೇಶ ಬಳಿಕ ದರ್ಶನ್‌ಗೆ ರಿಲ್ಯಾಕ್ಸ್ – ದಿಂಬು, ಚಾಪೆ ಜೊತೆಗೆ ಎರಡು ಜಮ್ಖಾನ ನೀಡಿದ ಅಧಿಕಾರಿಗಳು
ಅಪ್ರಾಪ್ತ ಬಾಲಕ ಪೋಸ್ಟ್ ಮಾಡಿದ ಫೋಟೋವನ್ನು ಮತ್ತೊಮ್ಮೆ ಬೇರೊಬ್ಬ ವ್ಯಕ್ತಿಯ ಐಡಿಯಿಂದ ಶೇರ್ ಮಾಡಲಾಗಿತ್ತು. ಕಾರಿನ ಬೋನೆಟ್ ಮೇಲೆ ಪಾಕಿಸ್ತಾನ ಧ್ವಜ ಹಾಗೂ ನಂಬರ್ ಪ್ಲೇಟ್‌ಗೆ 5/9/25 ಎಂದು ಬರೆದು ಪಕ್ಕದಲ್ಲಿ ಪಾಕಿಸ್ತಾನ ಧ್ವಜದ ಚಿತ್ರ ಹಾಕಿ ಪೋಸ್ಟ್ ಮಾಡಿದ್ದ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್ | ಕ್ರಿಕೆಟಿಗ ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ಕೋರ್ಟ್
ಇದೀಗ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಕಲಂ 299, 353(2), ಆರ್/ಡಬ್ಲೂ 3/5 ಕೇಸ್ ದಾಖಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ ಪೋಸ್ಟ್ ಹಾಕಿ, ಪರಿಸ್ಥಿತಿ ಕದಡುವ ಮುನ್ನವೇ ಆರೋಪಿಯನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.