ತಿರುವನಂತಪುರಂ: ಕೇರಳದ ಕಲಮಶ್ಯೇರಿಯಲ್ಲಿ ಇತ್ತೀಚೆಗೆ ನಡೆದ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವ ಹೇಳಿಕೆ ನೀಡಿದ್ದ ಆರೋಪದ ಮೇಲೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrashekhar) ವಿರುದ್ಧ ಕೇರಳದಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಜಂಟಿಯಾಗಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153(A), ಸೆಕ್ಷನ್ 120(o) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೇರಳದ ಕಲಮಶ್ಯೇರಿಯಲ್ಲಿ ಬಾಂಬ್ ಸ್ಪೋಟ- ಓರ್ವ ದುರ್ಮರಣ
Advertisement
Advertisement
ಮಲಪ್ಪುರಂ ಜಿಲ್ಲೆಯಲ್ಲಿ ಇಸ್ಲಾಮಿಸ್ಟ್ ಗ್ರೂಪ್ (Islamic Group) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಮಾಸ್ ನಾಯಕನ ವರ್ಚುವಲ್ ಭಾಷಣ ಮತ್ತು ಕೊಚ್ಚಿ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಚಿವರು ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೇರಳ ಪೊಲೀಸರ (Kerala Police) ಸೈಬರ್ ಸೆಲ್ ಎಫ್‌ಐಆರ್ ದಾಖಲಿಸಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಲ್ಲಿ ಬಾಂಬ್ ಬ್ಲಾಸ್ಟ್- ಕೇರಳ ಸಿಎಂಗೆ ಅಮಿತ್ ಶಾ ಕರೆ
Advertisement
ಕೇರಳದಲ್ಲಿ ಬಾಂಬ್ ಬ್ಲಾಸ್ಟ್ ಬೆನ್ನಲ್ಲೇ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವೆ ಮಾತಿನ ಚಕಮಕಿ ಆರಂಭವಾಗಿತ್ತು. ಸ್ಫೋಟದ ನಂತರ, ಚಂದ್ರಶೇಖರ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಟೀಕಿಸುವ ಪೋಸ್ಟ್‌ಗಳನ್ನು ಟ್ವಟ್ಟರ್ ಎಕ್ಸ್ ಖಾತೆಯಲ್ಲಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
Advertisement
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವ ರಾಜೀವ್ ಚಂದ್ರಶೇಖರ್, ನಾನು ಯಾವುದೇ ನಿರ್ದಿಷ್ಟ ಸಮುದಾಯದ ಬಗ್ಗೆ ಮಾತನಾಡಿಲ್ಲ. ನಾನು ನಿರ್ದಿಷ್ಟವಾಗಿ ಹಮಾಸ್ ಅನ್ನು ಉಲ್ಲೇಖಿಸಿದ್ದೇನೆ. ಹಮಾಸ್ ಅನ್ನು ಸಮುದಾಯದೊಂದಿಗೆ ಸಮೀಕರಿಸಲು ಪಿಣರಾಯಿ ವಿಜಯನ್ ಬಯಸುತ್ತಿರುವಂತಿದೆ ಎಂದು ದೂರಿದ್ದರು. ಇದನ್ನೂ ಓದಿ: Kerala Bomb Blast: ಬಾಂಬ್ ಇಟ್ಟಿದ್ದು ನಾನೇ ಅಂತಾ ಪೊಲೀಸರಿಗೆ ವ್ಯಕ್ತಿ ಶರಣು!
ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ಏನಿತ್ತು?
ಕಾಂಗ್ರೆಸ್ ಮತ್ತು ಸಿಪಿಎಂನ ಓಲೈಕೆ ರಾಜಕಾರಣದ ಬೆಲೆಯನ್ನು ಎಲ್ಲ ಸಮುದಾಯಗಳ ಮುಗ್ಧರು ಭರಿಸಬೇಕಾಗುತ್ತದೆ. ಅದನ್ನೇ ಇತಿಹಾಸ ನಮಗೆ ಕಲಿಸಿದೆ. ಭಯೋತ್ಪಾದಕ ಹಮಾಸ್ ಅನ್ನು ದ್ವೇಷ ಹರಡಲು ಮತ್ತು ಕೇರಳದಲ್ಲಿ ಜಿಹಾದ್‌ಗೆ ಕರೆ ನೀಡಲು ಕಾಂಗ್ರೆಸ್/ಸಿಪಿಎಂ/ಯುಪಿಎ/ಇಂಡಿಯಾ ಬ್ಲಾಕ್ ಬಳಸಿಕೊಳ್ಳುತ್ತಿವೆ. ಇದು ತುಷ್ಟೀಕರಣ ರಾಜಕೀಯ. ಇದು ಬೇಜವಾಬ್ದಾರಿ ಹುಚ್ಚು ರಾಜಕಾರಣದ ಪರಮಾವಧಿ. ಸಾಕು! ಎಂದು ಟ್ವೀಟ್ ಮಾಡಿದ್ದರು.
ಇದರೊಂದಿಗೆ ನೀವು ನಿಮ್ಮ ಹಿತ್ತಲಿನಲ್ಲಿ ಹಾವುಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವು ನಿಮ್ಮ ನೆರೆಹೊರೆಯವರನ್ನು ಕಚ್ಚುತ್ತವೆ. ಅಂತಿಮವಾಗಿ ಆ ಹಾವುಗಳು ಹಿತ್ತಲಿನಲ್ಲಿ ಯಾರನ್ನು ಕಂಡರೂ ಅವರ ಮೇಲೆ ಆಕ್ರಮಣ ಮಾಡುತ್ತವೆ ಎಂಬ ಹಿಲರಿ ಕ್ಲಿಂಟನ್ ಅವರ ಕೋಟ್ ಅನ್ನು ಉಲ್ಲೇಖಿಸಿದ್ದರು.
ಕೇರಳದ ಕಲಮಶ್ಯೇರಿಯಲ್ಲಿ ಪ್ರಾರ್ಥನಾ ಮಂದಿರದಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
Web Stories