ಮುಂಬೈ: ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪದ ಮೇಲೆ ಇಬ್ಬರು ಅನಾಮಿಕ ವ್ಯಕ್ತಿಗಳ ಮೇಲೆ ಮಹಾರಾಷ್ಟ್ರದ ಮನ್ಖರ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ತಡರಾತ್ರಿ ಮನ್ಖರ್ಡ್ ನಲ್ಲಿ ಇಬ್ಬರು ವ್ಯಕ್ತಿಗಳು ಪಟಾಕಿಯನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಇದನ್ನು ಗಮನಿಸಿದ ಆರ್‌ಟಿಐ ಕಾರ್ಯಕರ್ತ ಶಖೀಲ್ ಅಹಮ್ಮದ್ ಶೇಖ್ ಸುಪ್ರೀಂ ಆದೇಶವನ್ನು ಮೀರಿ, ಇಬ್ಬರು ವ್ಯಕ್ತಿಗಳು ಮಧ್ಯರಾತ್ರಿ ಪಟಾಕಿ ಹೊಡೆದಿದ್ದಾರೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
Advertisement
Advertisement
ಸುಪ್ರೀಂ ಆದೇಶದ ಉಲ್ಲಂಘನೆ ಮೇರೆಗೆ ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‍ನ ತೀರ್ಪಿನ ನಂತರ ಪಟಾಕಿ ಹೊಡೆಯುವ ಸಂಬಂಧಕ್ಕೆ ದೇಶದಲ್ಲೇ ಇದೇ ಮೊದಲ ದೂರೆಂದು ಪೊಲೀಸರು ತಿಳಿಸಿದ್ದಾರೆ.
Advertisement
ಸುಪ್ರೀಂ ಹೇಳಿದ್ದೇನು?
ಅಕ್ಟೋಬರ್ 23ರಂದು ಸುಪ್ರೀಂ ಕೋರ್ಟಿನ ನ್ಯಾ. ಎ. ಕೆ ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ದೇಶಾದ್ಯಂತ ಸಂಪೂರ್ಣವಾಗಿ ಪಟಾಕಿಯನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸಬಹುದು. ಅಲ್ಲದೇ ಪಟಾಕಿಗಳನ್ನು ರಾತ್ರಿ 8 ರಿಂದ ರಾತ್ರಿ 10 ವರೆಗೆ ಮಾತ್ರ ಹೊಡೆಯಬೇಕೆಂದು ಆದೇಶ ನೀಡಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv