– ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ
– ಬೆಂಗಳೂರಿನ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಬೆಂಗಳೂರು: ಭಾರತ ಹಾಕಿ (Team India Hockey) ತಂಡದ ಡಿಫೆಂಡರ್ ಆಟಗಾರ ವರುಣ್ ಕುಮಾರ್ (Varun Kumar) ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
Advertisement
ಪ್ರತಿಷ್ಠಿತ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವತಿಯ ಮೇಲೆ ಭಾರತೀಯ ಹಾಕಿ ತಂಡದ ಡಿಫೆಂಡರ್ ವರುಣ್ ಕುಮಾರ್ ಅತ್ಯಾಚಾರ ನಡೆಸಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
Advertisement
Advertisement
ಜ್ಙಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರೈನಿಂಗ್ ಪಡೆಯುವಾಗ ವರುಣ್ ಕುಮಾರ್‌ಗೆ ಇನ್‌ಸ್ಟಾ ಮೂಲಕ ಯುವತಿಯ ಪರಿಚಯವಾಗಿತ್ತು. ಯುವತಿ 17 ವರ್ಷದವಳಾಗಿದ್ದಾಗಲೇ ಪ್ರೀತಿ (Love) ಮಾಡುವಂತೆ ಹಿಂದೆ ಬಿದ್ದಿದ್ದ ವರುಣ್ ಕುಮಾರ್ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಕೆ
Advertisement
2019 ರಿಂದ ಯುವತಿ ಜೊತೆಗೆ ಸಂಪರ್ಕದಲ್ಲಿದ್ದ ವರುಣ್ ಕುಮಾರ್ ಐದು ವರ್ಷಗಳಿಂದ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದು, ಈಗ ಮದುವೆಯಾಗದೇ ವಂಚಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಮೂಲತಃ ಹಿಮಾಚಲ ಪ್ರದೇಶದವರಾಗಿರುವ ಕುಮಾರ್ ಹಾಕಿಗಾಗಿಯೇ ಪಂಜಾಬ್ ಗೆ ಶಿಫ್ಟ್ ಆಗಿದ್ದರು. 2017ರಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾದ ವರುಣ್ 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ, 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸಾಧನೆಗೆ ಹಿಮಾಚಲ ಪ್ರದೇಶ ಸರ್ಕಾರ 1 ಕೋಟಿ ರೂ. ನಗದು ಬಹುಮಾನ ಸಹ ಘೋಷಿಸಿತ್ತು. 2021 ನೇ ಸಾಲಿನ ಅರ್ಜುನ ಪ್ರಶಸ್ತಿಗೂ ವರುಣ್ ಕುಮಾರ್ ಭಾಜನರಾಗಿದ್ದರು. ಈಗ ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ ಅತ್ಯಾಚಾರ ಆರೋಪ ಬಂದಿದ್ದು, ವರುಣ್ ಕುಮಾರ್ ವಿರುದ್ಧ ಪೋಕ್ಸೋ, ಅತ್ಯಾಚಾರ ಹಾಗೂ ವಂಚನೆ ಕೇಸ್ ಅಡಿ ಎಫ್‌ಐಆರ್ ದಾಖಲಾಗಿದೆ. ಜಲಂಧರ್‌ನಲ್ಲಿರುವ ವರುಣ್‌ಗಾಗಿ ಜ್ಞಾನಭಾರತಿ ಪೊಲೀಸರು ಬಲೆ ಬೀಸಿದ್ದಾರೆ.