ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಮುಖ್ಯ ಶಿಕ್ಷಕನ ವಿರುದ್ಧ ಕೇಸ್

Public TV
1 Min Read
YADAGIRI

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕ ಶಿಕ್ಷಕ ಹಣಮೇಗೌಡನ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.

ಕಾಮುಕ ಶಿಕ್ಷಕ ಹಣಮೇಗೌಡ ಎರಡ್ಮೂರು ವರ್ಷಗಳಿಂದ ವಿದ್ಯಾರ್ಥಿಯರಿಗೆ ಲೈಂಗಿಕ ಕಿರುಕುಳ (Sexual Harassment) ನೀಡ್ತಿದ್ದ. ಈಗಾಗಲೇ ಅನುಚಿತ ವರ್ತನೆ ಆರೋಪದಡಿ ಶಿಕ್ಷಕ ಹಣಮೇಗೌಡನನ್ನು ಜಿಲ್ಲಾ ಪಂಚಾಯತಿ ಸಿಇಓ ಗರೀಮಾ ಪನ್ವಾರ್ ಅಮಾನತು ಮಾಡಿ ಆದೇಶಿಸಿದ್ರು. ಅಲ್ಲದೇ ಇದೇ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಜನ ಶಿಕ್ಷಕ ಇಲಾಖೆ ಅಧಿಕಾರಿಗಳ ತಂಡದಿಂದ ಶಾಲೆಗೆ ಭೇಟಿ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗಿತ್ತು.

ಅಧಿಕಾರಿಗಳ ತಂಡದ ಭೇಟಿ ವೇಳೆ ಶಾಲೆಯ ವಿದ್ಯಾರ್ಥಿನಿಯರು (Students) ಶಿಕ್ಷಕನ ಕರಾಳ ಮುಖ ಅನಾವರಣ ಮಾಡಿದ್ರು. ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಕಣ್ಣೀರಾಕುತ್ತಲೇ ಅಧಿಕಾರಿಗಳ ಮುಂದೆ ಎಲ್ಲಾ ವಿಚಾರವನ್ನ ವಿದ್ಯಾರ್ಥಿನಿಯರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ರು. ಪರಿಶೀಲನೆ ವರದಿಯ ಆಧಾರದ ಮೇಲೆ ಯಾದಗಿರಿ ಡಿಡಿಪಿಐ ಮಂಜುನಾಥ ಎಚ್.ಟಿ ಅವರಿಂದ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: ಹೊಸಪೇಟೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ನಾಲ್ವರು ಮಹಿಳೆಯರ ರಕ್ಷಣೆ

Share This Article