ಮುಂಬೈ: ಕಾಮಗಾರಿ ಪೂರ್ಣವಾಗದ ಸೇತುವೆಯನ್ನು ಉದ್ಘಾಟಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ (Aaditya Thackeray) ವಿರುದ್ಧ ದೂರು ದಾಖಲಾಗಿದೆ.
ಮುಂಬೈ ಮಹಾನಗರ ಪಾಲಿಕೆ (BMC)ಯು ಠಾಕ್ರೆ ವಿರುದ್ಧ ಈ ದೂರು ನೀಡಿದೆ. ದೂರಿನಲ್ಲಿ ಗುರುವಾರ ರಾತ್ರಿ ಪೂರ್ಣಗೊಳ್ಳದ ಲೋವರ್ ಪರೇಲ್‍ನಲ್ಲಿ ಡೆಲಿಸ್ಲೆ ಸೇತುವೆಯ ಎರಡನೇ ಕ್ಯಾರೇಜ್‍ವೇಯನ್ನು ಆದಿತ್ಯ ಠಾಕ್ರೆ ಅವರು ಉದ್ಘಾಟಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
Advertisement
Advertisement
ಸೇತುವೆಯ (Bridge Inauguration) ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಬಳಕೆಗೆ ಸುರಕ್ಷಿತವೆಂದು ಪ್ರಮಾಣೀಕರಿಸಲಾಗಿಲ್ಲ. ಸೇತುವೆಯನ್ನು ಅಕಾಲಿಕವಾಗಿ ಬಳಸುವ ವಾಹನ ಚಾಲಕರಿಗೆ ಸಂಭವನೀಯ ಅಪಾಯಗಳ ಬಗ್ಗೆ ನಾಗರಿಕ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ
Advertisement
ಸದ್ಯ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಜೊತೆಗೆ ಸುನಿಲ್ ಶಿಂದ್ ಹಾಗೂ ಸಚಿನ್ ಅಹಿರ್ ವಿರುದ್ಧ ಐಪಿಸಿ ಸೆಕ್ಷನ್ 143 (ದಂಡನೆ), 149 (ಅಕ್ರಮವಾಗಿ ಗುಂಪುಗೂಡುವಿಕೆ), 336 ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯಿದೆ) ಹಾಗೂ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Advertisement
ದಕ್ಷಿಣ ಮುಂಬೈ ಮತ್ತು ಲೋವರ್ ಪರೇಲ್ ನಡುವಿನ ನಿರ್ಣಾಯಕ ಸಂಪರ್ಕವಾದ ಡೆಲಿಸ್ಲೆ ಸೇತುವೆಯನ್ನು ಜೂನ್‍ನಲ್ಲಿ ಭಾಗಶಃ ತೆರೆಯಲಾಯಿತು. ಕರಿ ರಸ್ತೆಯನ್ನು ಲೋವರ್ ಪರೇಲ್‍ಗೆ ಸಂಪರ್ಕಿಸುವ ಮತ್ತೊಂದು ಹಂತವು ಸೆಪ್ಟೆಂಬರ್ ನಲ್ಲಿ ತೆರೆಯಲ್ಪಟ್ಟಿತು.