ತಿರುವನಂತಪುರಂ: ಕೇರಳದ (Kerala) ವಿಝಿಂಜಂನಲ್ಲಿ ಅದಾನಿ ಗ್ರೂಪ್ ನಿರ್ಮಿಸುತ್ತಿರುವ 900 ಮಿಲಿಯನ್ ಡಾಲರ್ (ಸುಮಾರು 7,350 ಕೋಟಿ ರೂ.) ಮೊತ್ತದ ಬೃಹತ್ ಬಂದರು (Adani Port ) ನಿರ್ಮಾಣ ಯೋಜನೆ ವಿರುದ್ಧದ ಪ್ರತಿಭಟನೆ (Protest_ ಹಿಂಸಾಚಾರಕ್ಕೆ ತಿರುಗಿದೆ.
ಬಂದರು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಬಂಧಿತರಾಗಿರುವ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಭಾನುವಾರ ರಾತ್ರಿ ವಿಝಿಂಜಂನ ಪೊಲೀಸ್ ಠಾಣೆ (Vizhinjam Police Station) ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಘರ್ಷಣೆಯಲ್ಲಿ ಸುಮಾರು 40 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ 3,000 ಕ್ಕೂ ಅಧಿಕ ಮಂದಿ ಮೇಲೆ ಕೇಸ್ ದಾಖಲಿಸಲಾಗಿದೆ. ಐಪಿಸಿ (IPC) ಸೆಕ್ಷನ್ 143, 147, 120-ಬಿ, 447 ಹಾಗೂ 353 ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬಂದಿದ್ದಕ್ಕೆ ಶಿಕ್ಷಕಿಗೆ `I Love You’ ಹೇಳಿ ಲೈಂಗಿಕ ಕಿರುಕುಳ
Advertisement
Advertisement
ಭಾನುವಾರ ತಡರಾತ್ರಿ ಸುಮಾರು 3 ಸಾವಿರ ಮಂದಿ ವಿಝಿಂಜಂ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಬಿಡುಗಡೆ ಮಾಡದಿದ್ದರೆ, ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಹಿಂಸಾಚಾರದಲ್ಲಿ 40 ಪೊಲೀಸರು ಹಾಗೂ ಸ್ಥಳೀಯರು ಗಾಯಗೊಂಡಿದ್ದಾರೆ. ಐದು ಪೊಲೀಸ್ ವಾಹನಗಳನ್ನು ಹಾನಿಗೊಳಿಸಿ, ಠಾಣೆ ಉಪಕರಣಗಳನ್ನು ನಾಶಪಡಿಸಿದ್ದಾರೆ. ದಾಳಿಯಲ್ಲಿ ಸುಮಾರು 85 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಹೆಚ್ಚಳ, ಭುಗಿಲೆದ್ದ ಪ್ರತಿಭಟನೆ – ತೈಲ ದರ ಭಾರೀ ಇಳಿಕೆ
Advertisement
Advertisement
ಈ ಹಿನ್ನೆಲೆಯಲ್ಲಿ ಸೋಮವಾರ ಮಹಿಳೆಯರು, ಮಕ್ಕಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕಾನೂನು ಬಾಹಿರ, ಗಲಭೆ ಹಾಗೂ ಕ್ರಿಮಿನಲ್ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ತಿರುವನಂತಪುರಂ (Thiruvananthapuram) ನಗರ ಪೊಲೀಸ್ ಆಯುಕ್ತರು ಈ ಸಂಬಂಧ ಮಾತನಾಡಿ, ಜನರು ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ದಾಳಿ ನಡೆಸಿದ್ದಾರೆ. ಠಾಣೆ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ನಾವು ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಸರ್ವಪಕ್ಷ ಸಭೆ ಕರೆದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಿನ ದಿನಕ್ಕೂ ಹೆಚ್ಚುತ್ತಿರುವ ವಿರೋಧ ಅದಾನಿ ಗ್ರೂಪ್‌ಗೆ (Adani Group) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭಾರತದ ದಕ್ಷಿಣ ತುದಿಯಲ್ಲಿರುವ ಬಂದರಿನ ಸ್ಥಳವು ದುಬೈ, ಸಿಂಗಾಪುರ ಮತ್ತು ಶ್ರೀಲಂಕಾದ ಬಂದರುಗಳಿಂದ ವ್ಯಾಪಾರವನ್ನು ಸೆಳೆಯಲು ಅತೀ ಮುಖ್ಯ ಸ್ಥಳ ಎನ್ನುವುದು ಅದಾನಿ ಮತ್ತು ಉದ್ಯಮ ಮಂದಿಯ ಅಂದಾಜು. ಹೀಗಾಗಿ ಇಲ್ಲೇ ಬಂದರು ನಿರ್ಮಿಸಲು ಅದಾನಿ ಕಂಪನಿ ಮುಂದಾಗಿದೆ. ಆದರೆ ಇದಕ್ಕೆ ಸ್ಥಳೀಯ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಈ ನಡುವೆ ಬಂಧಿತ ಲಿಯೋ ಸ್ಟಾನ್ಲಿ, ಮುತ್ತಪ್ಪನ್, ಪುಷ್ಪರಾಜ್ ಮತ್ತು ಶಂಕಿ ಅವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.