ಕೋಲ್ಕತ್ತಾ: ಬಂಗಾಳದ ಖ್ಯಾತ ವ್ಯಂಗ್ಯಚಿತ್ರಕಾರ ನಾರಾಯಣ್ ದೇಬನಾಥ್(97) ಅವರು ಇಂದು ಕೋಲ್ಕತಾದಲ್ಲಿ ನಿಧನರಾಗಿದ್ದಾರೆ.
ಬಂಗಾಳಿ ಕಾಮಿಕ್ ಪಾತ್ರಗಳಾದ ಹಂಡಾ ಭೋಂಡಾ, ಬಂತುಲ್ ದಿ ಗ್ರೇಟ್ ಮತ್ತು ನೋಂಟೆ ಫೋಂಟೆಯ ಜನಪ್ರಿಯ ಬಂಗಾಳಿ ಕಾಮಿಕ್ ಸ್ಟ್ರಿಪ್‌ಗಳ ಸೃಷ್ಟಿಕರ್ತರಾಗಿದ್ದರು. ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿಸೆಂಬರ್ 24 ರಂದು ನಾರಾಯಣ್ ದೇಬನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ 10.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
Advertisement
Cartoonist and Padma Shri awardee, Narayan Debnath passes away at the age of 97 after prolonged illness. He was the creator of several Bengali comic characters and was undergoing treatment at Bellevue Hospital in Kolkata. pic.twitter.com/DecV71N1Tv
— ANI (@ANI) January 18, 2022
Advertisement
ನಾರಾಯಣ್ ದೇಬನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರಸಿದ್ಧ ಸಾಹಿತಿ, ಚಿತ್ರಕಾರ, ವ್ಯಂಗ್ಯಚಿತ್ರಕಾರ ಮತ್ತು ಮಕ್ಕಳ ಜಗತ್ತಿಗೆ ಕೆಲವು ಅಮರ ಪಾತ್ರಗಳ ಸೃಷ್ಟಿಕರ್ತ ನಾರಾಯಣ ದೇಬನಾಥ್ ಇನ್ನಿಲ್ಲದಿರುವುದು ಅತ್ಯಂತ ದುಃಖಕರವಾಗಿದೆ. ಅವರ ಹಂಡಾ ಭೋಂಡಾ, ಬಂತುಲ್ ದಿ ಗ್ರೇಟ್ ಮತ್ತು ನೋಂಟೆ ಫೋಂಟೆ ಚಿತ್ರಗಳು ನಮ್ಮ ಹೃದಯದಲ್ಲಿ ಅಚ್ಚೊಡೆದಿನಂತಿದೆ. ಇದನ್ನೂ ಓದಿ: ಗೂಗಲ್ ಮೀಟ್‍ನಲ್ಲಿ ಮದುವೆ – ಝೋಮಾಟೋ ಊಟ
Advertisement
We were proud to bestow upon him Bengal’s highest award Banga Bibhusan in 2013. His passing away is certainly an immeasurable loss to the world of literary creativity and comics.
My deepest condolences to his family, friends, readers and countless fans and followers.
— Mamata Banerjee (@MamataOfficial) January 18, 2022
Advertisement
2013ರಲ್ಲಿ ಅವರಿಗೆ ಬಂಗಾಳದ ಅತ್ಯುನ್ನತ ಪ್ರಶಸ್ತಿ ಬಂಗಾ ಬಿಭೂಷಣವನ್ನು ದೊರೆತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಅವರ ನಿಧನವು ಖಂಡಿತವಾಗಿಯೂ ಸಾಹಿತ್ಯಿಕ ಸೃಜನಶೀಲತೆ ಮತ್ತು ಕಾಮಿಕ್ಸ್ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ, ಸ್ನೇಹಿತರು, ಓದುಗರು ಮತ್ತು ಅಸಂಖ್ಯಾತ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ನನ್ನ ಆಳವಾದ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ