ನವದೆಹಲಿ: ವಾಯು ಮಾಲಿನ್ಯದಿಂದ ದೆಹಲಿ (Delhi Air Pollution) ತತ್ತರಿಸಿದೆ. ಸತತ 4ನೇ ದಿನವೂ ಗಾಳಿಯ ಗುಣಮಟ್ಟ ವಿಪರೀತವಾಗಿ ಹಾಳಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿನ ಪ್ರಜೆಗಳು ಏಕಕಾಲದಲ್ಲಿ 4 ಸಿಗರೇಟ್‌ಗೆ ಸಮಾನವಾದ ಹೊಗೆಯನ್ನು ಸೇವನೆ ಮಾಡ್ತಿದ್ದಾರೆ. ಪರಿಣಾಮ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಿದೆ. ಮಾಸ್ಕ್ ಧರಿಸಿ.. ವಾಕಿಂಗ್ ಮಾಡ್ಬೇಡಿ.. ಉಗುರುಬೆಚ್ಚಗಿನ ನೀರು ಕುಡೀರಿ ಎಂದು ವೈದ್ಯರು ಸೂಚಿಸಿದ್ದಾರೆ.
ಇನ್ನೂ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ (Delhi Government) ಮೂರನೇ ಹಂತದ ಕ್ರಮ ಜಾರಿಗೊಳಿಸಿದ್ದು, BS 3 ಪೆಟ್ರೋಲ್, BS IV ಡೀಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅಂತರರಾಜ್ಯ ಬಸ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.
Advertisement
Advertisement
ಇದರ ಹೊರತಾಗಿಯೂ ನಿಯಮವನ್ನು ಗಾಳಿಗೆ ತೂರಿದವರಿಗೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಸುಮಾರು 550 ಚಲನ್ ವಿಧಿಸಿದ್ದು, 1 ಕೋಟಿ ರೂ.ಗಿಂತಲೂ ಅಧಿಕ ದಂಡ ವಿಧಿಸಲಾಗಿದೆ. ಇದರೊಂದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಹೊಂದಿರದಿದ್ದಕ್ಕಾಗಿ 4,855 ವಾಹನಗಳಿಗೆ ಚಲನ್ ನೀಡಿದ್ದು, ಒಟ್ಟು 4.8 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ʻಬ್ಯಾಗ್ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್ ತಪಾಸಣೆb
Advertisement
Advertisement
ಮಾನ್ಯ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ಹೊಂದಿರದ ವಾಹನ ಚಾಲಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ ನಗರದ ಪೂರ್ವ, ಮಧ್ಯ ಮತ್ತು ಉತ್ತರ ವ್ಯಾಪ್ತಿಯಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೇಲ್ ವಾಹನಗಳಿಗೆ ಒಟ್ಟು 293 ಚಲನ್, ಪಿಯುಸಿಸಿ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ಒಟ್ಟು 2,404 ಚಲನ್‌ಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ದೂರು – ನಡ್ಡಾ, ಖರ್ಗೆಯಿಂದ ಸ್ಪಷ್ಟನೆ ಕೇಳಿದ ಚುನಾವಣಾ ಆಯೋಗ
ಎಲ್ಲೆಲ್ಲಿ ಎಷ್ಟು ಚಲನ್ ವಿತರಣೆ?
GRAP -III ನಿಯಮ ಉಲ್ಲಂಘಿಸಿದವರ ವಿರುದ್ಧ ನವದೆಹಲಿ ವ್ಯಾಪ್ತಿಯಲ್ಲಿ 63 ಚಲನ್, ಪಶ್ಚಿಮ ವಲಯದಲ್ಲಿ 73 ಮತ್ತು ದಕ್ಷಿಣ ವಲಯದಲ್ಲಿ 121 ಚಲನ್, ನವದೆಹಲಿ, ದಕ್ಷಿಣ ಮತ್ತು ಪಶ್ಚಿಮ ಶ್ರೇಣಿಗಳು ಪಿಯುಸಿಸಿ ಹೊಂದಿಲ್ಲದ ಕಾರಣ ಕ್ರಮವಾಗಿ 322, 894 ಮತ್ತು 1,235 ಚಲನ್‌ಗಳನ್ನು ವಿತರಿಸಲಾಗಿದೆ. ಸಂಚಾರ ಪೊಲೀಸರ ಮೂರು ವ್ಯಾಪ್ತಿಯಲ್ಲಿ ಶುಕ್ರವಾರ ಸುಮಾರು 3,000 ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ) ರಾಜೀವ್ ಕುಮಾರ್ ರಾವಲ್ ತಿಳಿಸಿದ್ದಾರೆ.