ಚಿಕ್ಕಬಳ್ಳಾಪುರ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಿಂತಾಮಣಿ ಅಪಘಾತ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದರು.
ಚಿಂತಾಮಣಿಯಲ್ಲಿ ಜೀಪ್ ಹಾಗೂ ಲಾರಿ ಭೀಕರ ಅಪಘಾತ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ. ಅದರಲ್ಲೂ ಆ ವಾಹನದಲ್ಲಿ ಜನರನ್ನು ಮಿತಿಮೀರಿ ತುಂಬಲಾಗಿತ್ತು. ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಕೆಯಾಗಲಿ ಎಂಬುದು ಸಚಿವರ ಪ್ರಾರ್ಥನೆಯಾಗಿದೆ. ಇದನ್ನೂ ಓದಿ: ಶೇ.60-65 ಮತದಾನದ ನಡೆದರೆ ಪ್ರಿಯಾಂಕಾಗೆ ಗೆಲುವು: ಸುವೇಂದು
Advertisement
Advertisement
ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ವಿಧಾನಸೌಧ ಮುತ್ತಿಗೆ ವಿಚಾರವಾಗಿ ಮಾತನಾಡಿದ ಅವರು, ಯುಪಿಎ ಅವಧಿಯಲ್ಲಿ ಎಲ್ಲ ಬೆಲೆಗಳು ಇಳಿದಿದ್ವಾ? ಎಂದು ಪ್ರಶ್ನಿಸಿದ್ದಾರೆ. ಯಾವ ಯಾವ ಬೆಲೆಗಳು ಇಳಿಸಿದ್ದಾರೆ ಎಂದು ಹೇಳಿ ಪ್ರತಿಭಟನೆ ಮಾಡಲಿ. ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಸುದೀರ್ಘ ಉತ್ತರ ಕೊಡ್ತೇವಿ. ಅದಕ್ಕೆ ನಾವು ತಯಾರಾಗಿದ್ದೀವಿ ಎಂದು ಹೇಳಿದರು. ಇದನ್ನೂ ಓದಿ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು