-ತಾಯಿಯ ಮೃತದೇಹಕ್ಕಾಗಿ ಮಕ್ಕಳ ಹುಡುಕಾಟ
ಹಾಸನ: ಮೂರು ತಿಂಗಳ ಹಿಂದೆ ಹೂತಿದ್ದ ಶವವನ್ನು ಕಿಡಿಗೇಡಿಗಳು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಯಾದಾಪುರ ಗ್ರಾಮದಲ್ಲಿ ನಡೆದಿದೆ.
85 ವರ್ಷದ ಲಕ್ಷ್ಮಮ್ಮ ವಯೋ ಸಹಜ ಕಾರಣದಿಂದ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರನ್ನು ಅವರ ಮಕ್ಕಳು ತಮ್ಮ ಸ್ವಂತ ಜಮೀನಿನಲ್ಲಿ ಮಣ್ಣು ಮಾಡಿದ್ದರು. ಮೃತ ಲಕ್ಷ್ಮಮ್ಮ ಅವರ ಮಗ ಮಂಜುನಾಥ್ ಕೆಲಸದ ನಿಮಿತ್ತ ಕುಟುಂಬ ಸಮೇತರಾಗಿ ತಿಪಟೂರಿನಲ್ಲಿ ವಾಸವಾಗಿದ್ದಾರೆ. ಇದೀಗ ಅವರು ತಮ್ಮ ಜಮೀನಿನ ಬಳಿ ಬಂದು ನೋಡಿದಾಗ ತಾಯಿಯ ಮೃತದೇಹವನ್ನು ಯಾರೋ ಕಿಡಿಗೇಡಿಗಳು ಕದ್ದೊಯ್ದಿರುವುದು ಪತ್ತೆಯಾಗಿದೆ. ವಾಮಾಚಾರಕ್ಕಾಗಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಭಾರತ್ ಬಂದ್ ದಿನ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?
ತಾಯಿಯನ್ನು ಮಣ್ಣು ಮಾಡಿದ್ದ ಜಾಗದಲ್ಲಿ ಗೋರಿ ಕಟ್ಟಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಇದೀಗ ಯಾರೋ ತಾಯಿಯ ಮೃತದೇಹವನ್ನು ಕದ್ದೊಯ್ದಿದ್ದು, ವಾಮಾಚಾರಕ್ಕೆ ಬಳಸುವ ಆತಂಕ ಶುರುವಾಗಿದೆ. ಹೀಗಾಗಿ ನಮ್ಮ ತಾಯಿಯ ಮೃತದೇಹ ಹುಡುಕಿಕೊಡಿ ಎಂದು ಮಕ್ಕಳು ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ