ವಾಷಿಂಗ್ಟನ್: ಗುರುವಾರ ಕೋಸ್ಟ್ರಿಕಾದಲ್ಲಿ ತುರ್ತು ಭೂಸ್ಪರ್ಶದ ವೇಳೆ ಕಾರ್ಗೋ ವಿಮಾನವೊಂದು ತುಂಡಾಗಿರುವ ಘಟನೆ ನಡೆದಿದೆ. ಡಿಹೆಚ್‌ಎಲ್ ಕಾರ್ಗೋ ವಿಮಾನ ರನ್‌ವೇಯಿಂದ ಜಾರಿದ ಪರಿಣಾಮ ಮುರಿದು ಬಿದ್ದಿದೆ.
ಘಟನೆ ಸಂಭವಿಸಿದ ವೇಳೆ ಸ್ಯಾನ್ ಜೋಸ್‌ನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಘಟನೆ ವೇಳೆ ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಬ್ಬರನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಇದನ್ನೂ ಓದಿ: E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?
Advertisement
#BREAKING #NEWS | A DHL Boeing 757 Freighter has crashed at Juan Santamaria Airport in Costa Rica earlier today.
Read more at AviationSource!https://t.co/WISE3PjcHS#DHL #JuanSantamariaAirport #AvGeek #Crash #Accident pic.twitter.com/dIECOqQkee
— AviationSource (@AvSourceNews) April 7, 2022
Advertisement
ಗುರುವಾರ ಬೆಳಗ್ಗೆ ವಿಮಾನ ಜುವಾಮ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಇದಾದ 25 ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ವೈಫಲ್ಯ ಕಂಡುಬಂದಿತ್ತು. ಹೀಗಾಗಿ ವಿಮಾನವನ್ನು ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದರು. ಈ ಸಂದರ್ಭ ಘಟನೆ ನಡೆದಿದೆ. ಇದನ್ನೂ ಓದಿ: ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ
Advertisement