ಬೆಂಗಳೂರು: ನವೆಂಬರ್ ತಿಂಗಳಿನಲ್ಲಿ ಶೇವ್ ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸಲು ಬೆಂಗಳೂರಿನ ಬೈಕ್ ರೈಡರ್ಸ್ ತಂಡ ಮುಂದಾಗಿದೆ.
‘ಬ್ರೋಸ್ ಅನ್ ವೀಲ್ಸ್’ ಹೆಸರಿನ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಾ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ನೆರವಾಗುವುದು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.
ಈ ತಿಂಗಳು ಯಾರೂ ಶೇವ್ ಮಾಡ್ಬೇಡಿ. ನಿಮ್ಮ ಶೇವ್ ಗೆ ಬಳಸುವ ಹಣವನ್ನು ಮಿಲ್ಯಾಪ್ ಮೂಲಕ ಬೆಂಗಳೂರಿನ ಕುಂದನಳ್ಳಿಯಲ್ಲಿರುವ ಕರುಣಾಶ್ರಯದಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ತಲುಪಿಸಲಾಗುತ್ತದೆ. ಕ್ಯಾನ್ಸರ್ ಕೊನೆಯ ಸ್ಟೇಜ್ ನಲ್ಲಿರುವವರಿಗೆ ನೀಡಲಾಗುತ್ತದೆ ಎಂದು ತಂಡ ಹೇಳಿದೆ.
ತಂಡ ೨ ಲಕ್ಷ ರೂ. ಹಣವನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದು, 4 ದಿನದಲ್ಲಿ 14 ಸಾವಿರ ರೂ. ಸಂಗ್ರಹಗೊಂಡಿದೆ. ನವೆಂಬರ್ 30 ರವರೆಗೆ ಜನರು ಹಣವನ್ನು ಹಾಕಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ – www.milaap.org/fundraisers/support-no-shave-november