ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಹೃದಯಸ್ತಂಭನದಿಂದ (Cardiac Arrest) ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಇಂತಹ ಪ್ರಕರಣಗಳು ನಿದ್ದೆಗೆಡಿಸಿದೆ. ಬ್ರೆಜಿಲ್ (Model) ನ ಖ್ಯಾತ ಮಾಡೆಲ್, ಫ್ಯಾಷನ್ ಲೋಕದ ತಾರೆ 33 ವರ್ಷದ ಹರೆಯದ ಲಾರಿಸ್ಸಾ ಬೋರ್ಗೆಸ್ ಕಾರ್ಡಿಯಾಕ್ ಅರೆಸ್ಟ್ ಆಗಿದ್ದರಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಎರಡು ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು ಎಂದು ಹೇಳಲಾಗುತ್ತಿದೆ.
ಮಾಡೆಲ್ ಸಾವಿನ ಕುರಿತು ಅವರ ಕುಟುಂಬಸ್ಥರೇ ಖಚಿತ ಪಡಿಸಿದ್ದು, ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ಇಷ್ಟು ಬೇಗ ನೀನು ನಮ್ಮನ್ನು ತೊರೆದಿದ್ದು ಅತೀವ ದುಃಖ ತಂದಿದೆ ಎಂದು ಸಂಕಟ ಹಂಚಿಕೊಂಡಿದ್ದಾರೆ.
ಫಿಟ್ನೆಸ್ ಮತ್ತು ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು ಲಾರಿಸ್ಸಾ. ಸಾಕಷ್ಟು ಉತ್ಪನ್ನಗಳಿಗೆ ಅವರು ರೂಪದರ್ಶಿಯಾಗಿದ್ದರು. ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಕೂಡಲೇ ಕೋಮಾಗೆ ಜಾರಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
Web Stories