ಬಾಯಲ್ಲಿ ಕರಗೋ ಕ್ಯಾರಮೆಲ್ ಮಿಠಾಯಿ ಮನೆಯಲ್ಲಿ ಮಕ್ಕಳಿರೋವಾಗಿ ಟೈ ಮಾಡೋಕೆ ಒಂದು ಪರ್ಫೆಕ್ಟ್ ರೆಸಿಪಿ. ನೆಂಟರಿಷ್ಟರು ಮನೆಯಲ್ಲಿದ್ದಾಗಲೂ ನೀವಿದನ್ನು ಮಾಡಿ, ಅವರ ಪ್ರಶಂಸೆಯನ್ನು ಖಂಡಿತಾ ಪಡೆದುಕೊಳ್ಳುತ್ತೀರಿ. ಇದರ ಒಂದು ಬೈಟ್ ನೀವು ಸವಿದರೆ ಅದು ಸಾಲೋದಿಲ್ಲ ಖಂಡಿತಾ. ಇಂತಹ ಒಂದು ಸಿಹಿ ಮಿಠಾಯಿಯನ್ನು ನೀವು ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬೆಣ್ಣೆ – 125 ಗ್ರಾಂ
ಸಿಹಿ ಕಂಡೆನ್ಸ್ಡ್ ಮಿಲ್ಕ್ – 400 ಗ್ರಾಂ
ಗೋಲ್ಡನ್ ಸಿರಪ್ – 2 ಟೀಸ್ಪೂನ್
ಕಂದು ಸಕ್ಕರೆ – 1 ಕಪ್
ವೈಟ್ ಚಾಕ್ಲೇಟ್ – ಮುಕ್ಕಾಲು ಕಪ್ ಇದನ್ನೂ ಓದಿ: ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಕಡಿಮೆ ಉರಿಯಲ್ಲಿ ಬೆಣ್ಣೆಯನ್ನು ಕರಗಿಸಿ.
* ಕಂಡೆನ್ಸ್ಡ್ ಮಿಲ್ಕ್, ಗೋಲ್ಡನ್ ಸಿರಪ್ ಹಾಗೂ ಕಂದು ಸಕ್ಕರೆಯನ್ನು ಸೇರಿಸಿ, ಕುದಿಯುವ ತನಕ ಕಡಿಮೆ ಉರಿಯಲ್ಲಿ ಬೆರೆಸಿ.
* 10 ನಿಮಿಷಗಳ ಕಾಲ ಕುದಿಸುತ್ತಾ ಆಗಾಗ ಕೈಯಾಡಿಸುತ್ತಿರಿ.
* ನಂತರ ಉರಿಯನ್ನು ಆಫ್ ಮಾಡಿ, ವೈಟ್ ಚಾಕ್ಲೇಟ್ ಅನ್ನು ಬೆರೆಸಿಕೊಳ್ಳಿ.
* ಈಗ ಒಂದು ಟ್ರೇಯಲ್ಲಿ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ತಯಾರಾದ ಮಿಶ್ರಣವನ್ನು ಹಾಕಿ, ಮೇಲ್ಮೈ ಅನ್ನು ಸಮಗೊಳಿಸಿ.
* ಮಿಶ್ರಣವನ್ನು ತಣ್ಣಗಾಗಲು ಬಿಟ್ಟ ಬಳಿಕ ಗಟ್ಟಿಯಾಗಲು ಫ್ರಿಜ್‌ನಲ್ಲಿಡಿ.
* ನಂತರ ಅದನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
* ಇದೀಗ ಸಿಹಿಯಾದ ಕ್ಯಾರಮೆಲ್ ಮಿಠಾಯಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ
Advertisement
Web Stories