ರಾಯಚೂರು/ಶಿವಮೊಗ್ಗ: ಜಿಲ್ಲೆಯ ಶಕ್ತಿನಗರದ ಆರ್ ಟಿಪಿಎಸ್ ನೌಕರ ಸಂಘದ ನಾಲ್ಕು ಜನ ಪದಾಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂರು ಜನ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದ ಬಳಿ ನಡೆದಿದೆ.
ಆರ್ ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಪ್ರದಾನ ಕಾರ್ಯದರ್ಶಿ ತಿಪ್ಪಣ್ಣ, ಜಂಟಿ ಕಾರ್ಯದರ್ಶಿ ಸಿದ್ದಪ್ಪ ಮೃತ ದುರ್ದೈವಿಗಳು. ಬೆಳಗ್ಗಿನ ಜಾವ 3 ಗಂಟೆ ವೇಳೆಯಲ್ಲಿ ಅಪಘಾತ ನಡೆದಿದೆ.
Advertisement
Advertisement
4 ಜನ ಕಾರಿನಲ್ಲಿ ಸಾಗರ ತಾಲೂಕಿನ ಜೋಗಕ್ಕೆ ಹೋಗುತ್ತಿದ್ದಾಗ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೋರ್ವನಿಗೆ ಗಂಭೀರ ಗಾಯಗಳಾಗಿವೆ. ಖಜಾಂಚಿ ನಾಗರಾಜ್ ಬಳೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಶವಗಳನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.