ರಾಮನಗರ: ಜಿಲ್ಲೆಯ ಅನೇಕ ಕಡೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ (Rain) ಹಲವು ಅವಾಂತರಗಳು ಸಂಭವಿಸಿವೆ. ಅರ್ಕಾವತಿ ನದಿ (Arkavathi River) ಪಾತ್ರದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಮೈದುಂಬಿ ಹರಿಯುತ್ತಿರುವ ನದಿಯಲ್ಲಿ ಕಾರ್ (Car) ಪತ್ತೆಯಾಗಿದೆ.
Advertisement
ಕನಕಪುರ ತಾಲೂಕಿನ ತಾಮಸಂದ್ರ ಗ್ರಾಮದ ಬಳಿ ನದಿಯಲ್ಲಿ ಕಾರನ್ನು ನೋಡಿದ ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕ್ರೇನ್ ಮೂಲಕ ಕಾರನ್ನು ಮೇಲೆತ್ತಿದ್ದಾರೆ. ಕಾರಿನ ಮಾಲೀಕರ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಇನ್ನೂ ರಾಮನಗರ ತಾಲೂಕಿನ ಹೊಂಬಯ್ಯನ ದೊಡ್ಡಿಯಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಮಾದವಿಲ್ಲದೇ ಭಾಗ್ಯಮ್ಮ ಕುಟುಂಬಸ್ಥರು ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ
Advertisement
Advertisement
ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಬ್ಬಾಳು ಗ್ರಾಮದಲ್ಲಿ ತಡರಾತ್ರಿ ಸುರಿದ ಮಳೆಗೆ ಕಬ್ಬಾಳು ಗ್ರಾಮದ ಬೆಸ್ಕಾಂ ಕಚೇರಿ ಜಲಾವೃತವಾಗಿದೆ. ಗ್ರಾಮದ ಹಲವು ಮನೆ, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಟ ನಡೆಸಿದ್ದಾರೆ. ನೀರಿನ ರಭಸಕ್ಕೆ ಕಬ್ಬಾಳು ವ್ಯವಸಾಯ ಸಹಕಾರ ಸಂಘದ ಕಚೇರಿಯ ಕಾಂಪೌಂಡ್ ಗೋಡೆ ಕುಸಿತವಾಗಿದೆ. ಅಲ್ಲದೇ ತಾಲೂಕಿನ ಕಚ್ಚುವನಹಳ್ಳಿ – ತೋಟಹಳ್ಳಿ ಸಂಪರ್ಕ ಸೇತುವೆ ಕೂಡಾ ಮಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?
Advertisement
ರಾಮನಗರ ಜಿಲ್ಲೆಯನ್ನು ಬಿಟ್ಟೂಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಮೊದಲೇ ಭೀತಿಯಲ್ಲಿದ್ದ ಜನರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮತ್ತಷ್ಟು ಭಯ ತರಿಸಿದೆ. ನಿರಂತರ ಮಳೆ ರೈತ ಸಮುದಾಯಕ್ಕೆ ಶಾಪವಾಗಿ ಪರಿಣಮಿಸಿದ್ದರೆ, ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜನರ ಬದುಕು ಮೂರಾಬಟ್ಟೆಯಾಗಿದ್ದು ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡು ತ್ವರಿತವಾಗಿ ಮಳೆಹಾನಿ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಯಿಸಿದ್ದಾರೆ.