ರಾಯಚೂರು: ನಡುರಸ್ತೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಕರಕಲಾಗಿರುವ ಘಟನೆ ರಾಯಚೂರಿನ
(Raichuru) ದೇವದುರ್ಗ (Devadurga) ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ.
ಕಾರು ಚಾಲಕ ದಯಾನಂದ್ ಪಾಟೀಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ದಕ್ಷಿಣದ ಹೆಸರಾಂತ ನಟ ಶ್ರೀಮನ್ ಎಂಟ್ರಿ
ಹಿರೆಬೂದೂರಿನಿಂದ ರಾಯಚೂರಿಗೆ ಡಸ್ಟರ್ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಮಾರ್ಗಮಧ್ಯೆ ಗಬ್ಬೂರಿನಲ್ಲಿ ಎಳೆನೀರು ಕುಡಿಯಲು ಕಾರಿನಿಂದ ಇಳಿದಿದ್ದರು. ಈ ವೇಳೆ ನೋಡನೋಡುತ್ತಲೇ ಇಂಜಿನ್ನಿಂದ ದಟ್ಟ ಹೊಗೆ ಆವರಿಸಿ, ಬಳಿಕ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯಿಂದಾಗಿ ಹೆದ್ದಾರಿಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಏಂ17ಘಿ 5057ನಂಬರ್ನ ಡಸ್ಟರ್ ಕಾರು ಬೆಂಕಿಗಾಹುತಿಯಾಗಿದೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ