ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಕಾರುಗಳನ್ನ ಕದಿಯುತ್ತಿದ್ದ ಖತರ್ನಾಕ್ ಕಳ್ಳರು, ಇದೀಗ ವಾಹನಗಳ ಬಿಡಿಭಾಗಗಳಿಗೂ ಕನ್ನ ಹಾಕಲು ಆರಂಭಿಸಿದ್ದಾರೆ.
ನಗರದ ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕವನ್ನ ತೋರಿದ್ದಾರೆ. ಇಲ್ಲಿನ ಗಜಾರಿಯಾ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಶೇಖರ್ ಎಂಬವರು ಐದು ದಿನದ ಹಿಂದೆಯಷ್ಟೇ ಮಾರುತಿ ಕಂಪನಿಯ ಹೊಸ ಕಾರನ್ನ ಖರೀದಿಸಿದ್ದರು. ಆದರೆ ಕಳೆದ ರಾತ್ರಿ ತಮ್ಮ ಮನೆ ಮುಂದೆಯ ರಸ್ತೆಯಲ್ಲಿ ನಿಲ್ಲಿಸಿದ್ದ ವೇಳೆ ಐನಾತಿ ಕಳ್ಳರು ಕಾರಿನ ಕೆಳಗೆ ಕಲ್ಲಿಟ್ಟು ನಾಲ್ಕು ಚಕ್ರಗಳನ್ನ ಕದ್ದು ಚಾಣಾಕ್ಷತೆಯಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.
- Advertisement 2-
- Advertisement 3-
ಇದನ್ನೂ ಓದಿ: 10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!
- Advertisement 4-
ಬೆಳಗ್ಗೆ ಮನೆಯಿಂದ ಹೊರ ಬಂದು ಹೊಸ ಕಾರನ್ನ ನೋಡಿದರೆ ಅದರ ಟೈರ್‍ಗಳನ್ನು ಕಳ್ಳತನ ಮಾಡಲಾಗಿದೆ. ಚಂದ್ರಶೇಖರ್ ಅವರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚಿಗೆ ನೆಲಮಂಗಲ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು