ಬೀಜಿಂಗ್: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರನ್ನು ತೆಗೆದುಕೊಂಡು ಹೋಗುವ ವೇಳೆ ಗೋಡೆಗೆ ಗುದ್ದಿ ಬಳಿಕ ಎರಡನೇ ಮಹಡಿಯಿಂದ ಕಾರು ಉರುಳಿ ಬಿದ್ದ ಘಟನೆಯೊಂದು ಚೀನಾದಲ್ಲಿ ನಡೆದಿದೆ.
ಈ ಘಟನೆ ಕಳೆದ ವಾರ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಕಾರಲ್ಲಿದ್ದ ಇಬ್ಬರೂ ಪವಾಡ ಸದೃಶವೆಂಬಂತೆ ಪಾರಾಗಿದ್ದಾರೆ.
Advertisement
Advertisement
ಏನಿದು ಘಟನೆ?: ವಾಹನಗಳನ್ನು ಪಾರ್ಕ್ ಮಾಡುವ ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿ ವ್ಯಕ್ತಿಯೋರ್ವ ತನ್ನ ಕಾರ್ ಪಾರ್ಕ್ ಮಾಡಿದ್ದನು. ಬಳಿಕ ಅದನ್ನು ತೆಗೆದುಕೊಂಡು ಹೋಗಲೆಂದು ಬಂದಿದ್ದು, ಈ ವೇಳೆ ಟರ್ನ್ ಮಾಡುವಾಗ, ಕಾರ್ ನೇರವಾಗಿ ತೆರಳಿ ಗೋಡೆಗೆ ಗುದ್ದಿದೆ. ಪರಿಣಾಮ ಗೋಡೆ ಒಡೆದು ಕಾರ್ 2ನೇ ಮಹಡಿಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ, ಚಾಲಕ ತನ್ನ ಕಾರಿನಲ್ಲಿದ್ದ ಯುಎಸ್‍ಬಿ ಕೇಬಲ್ ತೆಗೆದುಕೊಳ್ಳಲು ಪ್ರಯತ್ನಿದ್ದಾನೆ. ಈ ವೇಳೆ ಈತನ ಕಾಲು ಆ್ಯಕ್ಸಿಲೆಟರ್ ಗೆ ತಾಗಿದೆ. ಹೀಗಾಗಿ ಟರ್ನ್ ಮಾಡುವ ವೇಳೆ ಕಾರ್ ನೇರವಾಗಿ ಹೋಗಿ ಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮ ಕೆಳಕ್ಕೆ ಉರುಳಿದೆ. ಘಟನೆಯಲ್ಲಿ ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದರೆ, ಅದರಲ್ಲಿ ವೇಗವಾಗಿ ಬಂದ ಕಾರ್ ಗೋಡೆಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಘಟನೆಯಿಂದಾಗಿ ಯಾರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಕಾರ್ ಉರುಳಿ ಕೆಳಗಡೆ ಬಿದ್ದ ಬಳಿಕ ಮಹಿಳೆಯೊಬ್ಬರು ಕಾರು ಒಳಗಡೆಯಿಂದ ಹೊರಬಂದಿದ್ದಾರೆ. ಕೂಡಲೇ ಅಲ್ಲೆ ಇದ್ದ ಸ್ಥಳೀಯರು ಚಾಲಕನನ್ನು ಕೂಡ ಅಪಾಯದಿಂದ ಪಾರು ಮಾಡಿದ್ದಾರೆ.