ನವದೆಹಲಿ: ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಕಾರು ಮಾರಾಟ (Car Sales) ಕುಸಿತಗೊಂಡಿದೆ. ಒಟ್ಟಾರೆ ಸದ್ಯ ಈಗ 79 ಸಾವಿರ ಕೋಟಿ ರೂ.ಮೌಲ್ಯದ 7.90 ಲಕ್ಷ ವಾಹನಗಳು ಮಾರಾಟಕ್ಕೆ ಸಿದ್ದವಾಗಿದ್ದರೂ ಗ್ರಾಹಕರಿಂದ ಬುಕ್ಕಿಂಗ್ ಆಗುತ್ತಿಲ್ಲ.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಮಾಹಿತಿಯ ಪ್ರಕಾರ, ಕಡಿಮೆ ಮಾರಾಟ ಇರುವಾಗಲೂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಕಾರನ್ನು ಉತ್ಪಾದನೆ ಮಾಡಿದ್ದರಿಂದ ಮಾರಾಟ 18.81% ಕುಸಿದಿದೆ.
Advertisement
ಕುತೂಹಲದ ವಿಶೇಷ ಏನೆಂದರೆ 10-25 ಲಕ್ಷ ರೂ. ಬೆಲೆಯ ಕಾರುಗಳ ಮಾರಾಟವೂ ಕುಸಿತಗೊಂಡಿದೆ. ಕೋವಿಡ್ (Covid) ನಂತರ ಈ ಕಾರುಗಳ ಮಾರಾಟ ಭಾರೀ ಏರಿಕೆ ಕಂಡಿತ್ತು.
Advertisement
ಕಾರು ಖರೀದಿಯನ್ನು ಗ್ರಾಹಕರು ಮುಂದೂಡಲು ಹಲವು ಕಾರಣಗಳನ್ನು ನೀಡಬಹುದು. ಒಂದನೇಯದಾದಾಗಿ ಈ ವರ್ಷ ಲೋಕಸಭಾ ಚುನಾವಣೆ ಇತ್ತು. ಹೀಗಾಗಿ ಆರ್ಥಿಕ ಚಟುವಟಿಕೆಗಳು ಕಡಿಮೆ ಇತ್ತು. ಇದರ ಜೊತೆ ಹವಾಮಾನ ವೈಪರೀತ್ಯಗಳಿಂದಲೂ ಮಾರಾಟ ಕುಸಿತವಾಗಿದೆ. ಮೊದಲ 6 ತಿಂಗಳು ವಿಪರೀತ ಬೇಸಿಗೆ ಇದ್ದರೆ ನಂತರ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದೆಲ್ಲದರ ಪರಿಣಾಮ ಕಾರು ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ
Advertisement
Advertisement
ಇನ್ನೊಂದು ಮುಖ್ಯ ಕಾರಣ ಏನೆಂದರೆ ಕೆಲವರು ಎಲೆಕ್ಟ್ರಿಕ್ ಅಥವಾ ಪೆಟ್ರೋಲ್/ಡೀಸೆಲ್ ಎಂಜಿನ್ ಮಧ್ಯೆ ಯಾವ ಕಾರು ಖರೀದಿಸಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಿದ್ದರೂ ಹೊಸದಾಗಿ ಬಿಡುಗಡೆಯಾದ ಸುಜುಕಿ ಫ್ರಾಕ್ಸ್ ಮತ್ತು ಟಾಟಾ ಕರ್ವ್‌ಗೆ ಬೇಡಿಕೆಯಿದೆ.
ಕಾರುಗಳ ದರ ಇಳಿಕೆಗೆ ಹಲವು ಕಾರಣ ನೀಡಬಹುದು. ಅದರಲ್ಲೂ ಮುಖ್ಯವಾಗಿ ಕಾರು ಸಾಲ ದುಬಾರಿಯಾಗಿರುವುದು. ಭಾರತ ವಿಶ್ಯಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸಿವೆ. ಹಣದುಬ್ಬರವನ್ನು ನಿಯಂತ್ರಿಸಲು ಭಾರತದಲ್ಲಿ ಆರ್‌ಬಿಐ (RBI) ಬಡ್ಡಿ ದರ ಏರಿಸುತ್ತಾ ಹೋಗಿದೆ. ಕೊರೊನಾ ನಂತರ ದೇಶದ ಅರ್ಥವ್ಯವಸ್ಥೆಯನ್ನು ಸ್ಥಿರವಾಗಿಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.
ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಕಾರುಗಳ ಮಾರಾಟ ಕಡಿಮೆಯಾಗುತ್ತಿದೆ. ಕೆಲ ಕಂಪನಿಗಳು ತನ್ನ ಉತ್ಪಾದನಾ ಘಟಕವನ್ನೇ ಬಂದ್ ಮಾಡಲು ಮುಂದಾಗಿದೆ. ವಿಶ್ವದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ವೋಕ್ಸ್ ವಾಗನ್ ಬೆಲ್ಜಿಯಂ ಬ್ರುಸೆಲ್ಸ್‌ನಲ್ಲಿರುವ ಉತ್ಪಾದನಾ ಘಟಕವನ್ನು ಮುಚ್ಚಲು ಮುಂದಾಗುತ್ತಿದೆ. ಒಂದು ವೇಳೆ ಮುಚ್ಚಿದರೆ ಕಳೆದ 4 ದಶಕಗಳಲ್ಲಿ ವೋಕ್ಸ್‌ವಾಗನ್ ಮುಚ್ಚುತ್ತಿರುವ ಮೊದಲ ಘಟಕ ಇದಾಗಲಿದೆ. ಇದರ ಜೊತೆ ಜರ್ಮನಿಯ ಘಟಕವನ್ನು ಮುಚ್ಚಲು ಸಿದ್ಧತೆ ನಡೆದಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾರುಗಳು ಅಮೆರಿಕ, ಕೆನಡಾ, ಯುರೋಪ್ ದೇಶಗಳಲ್ಲಿ ಆಗುತ್ತಿದೆ. ಭಾರತದಲ್ಲಿ ಒಂದು ಕಾರು ತೆಗೆದುಕೊಂಡರೆ ಕನಿಷ್ಟ 7-8 ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 4-5 ವರ್ಷಗಳಲ್ಲಿ ಹೊಸ ಕಾರನ್ನು ಜನ ಖರೀದಿ ಮಾಡುತ್ತಿದ್ದಾರೆ. ಆದರೆ ರಷ್ಯಾ ಉಕ್ರೇನ್ ಯುದ್ಧದ ಬಳಿಕ ಯುರೋಪ್ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅಮೆರಿಕದಲ್ಲೂ ಹಣದುಬ್ಬರ ಜಾಸ್ತಿ ಇದೆ. ಈ ಕಾರಣಕ್ಕೆ ಕಾರು ಮಾರಾಟ ವಿಶ್ವದಲ್ಲೇ ಕಡಿಮೆಯಾಗುತ್ತಿದೆ.