ಸೂರತ್: ರಸ್ತೆಯ ಪಕ್ಕ ಬೈಕ್ ನಲ್ಲಿಸಿ ಗೆಳೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾದ ಪರಿಣಾಮ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ಗುಜರಾತ್ನ ತಪತಿ ನದಿಯ ಸೇತುವೆ ಮೇಲೆ ನಡೆದಿದೆ.
ಪಪ್ಪು ಲಾಲನಿ (22) ಅಪಘಾತದಲ್ಲಿ ಮೃತಪಟ್ಟು ಯುವಕನಾಗಿದ್ದು, ಶುಕ್ರವಾರ ರಾತ್ರಿ 12.45 ರ ವೇಳೆ ತಪತಿ ನದಿ ಸೇತುವೆ ಮೇಲೆ ತನ್ನ ಗೆಳೆಯರ ಜೊತೆ ಸೆಲ್ಫಿ ತೆಗೆದುಕೊಳ್ಳವ ವೇಳೆ ಅಪಘಾತ ಸಂಭವಿಸಿದೆ.
ನದಿಯ ಸೇತುವೆ ಮೇಲೆ ಲಾಲನಿ ಹಾಗೂ ಆತನ ಮೂವರು ಸ್ನೇಹಿತರು ಕುಳಿತು ಫೋಟೋ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಲಾಲನಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಅಪಘಾತ ನಡೆದ ಕಾರನ್ನು ಚಾಲಯಿಸುತ್ತಿದ್ದ ನಿಹಾಲ್ ಪಾಟೇಲ್ (22) ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.