ಕಲಬುರಗಿ: ಪಾರ್ಕಿಂಗ್ ಲಾಟ್‌ನಲ್ಲಿ (Parking Lot) ಮಲಗಿದ್ದ 3 ವರ್ಷದ ಮಗುವಿನ (Child) ಮೇಲೆ ಕಾರು (Car) ಹರಿದು ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಮನಕಲುಕುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.
ಹೈದರಾಬಾದ್‌ನ ಹೈಯತ್ ನಗರದ ಲೆಕ್ಚರ್ಸ್ ಕಾಲೋನಿಯಲ್ಲಿ ದುರ್ಘಟನೆ ನಡೆದಿದೆ. ಕಲಬುರಗಿ (Kalaburagi) ಮೂಲದ ದಾರುಣ್ಯ (3) ಘಟನೆಯಲ್ಲಿ ಸಾವನ್ನಪ್ಪಿರುವ ಬಾಲಕಿ.
ಮಗುವಿನ ತಾಯಿ ಕೆಲಸ ಹುಡುಕಿಕೊಂಡು 3 ಮಕ್ಕಳೊಂದಿಗೆ ಹೈದರಾಬಾದ್ ತೆರಳಿದ್ದಳು. ನಗರದಲ್ಲಿ ವಿಪರೀತ ತಾಪಮಾನವಿದ್ದ ಕಾರಣ ತನ್ನ 3 ವರ್ಷದ ಮಗುವನ್ನು ಬೇಸ್ಮೆಂಟ್ ಮೇಲೆ ಮಲಗಿಸಿದ್ದಳು. ಆದರೆ ಚಾಲಕ ಮಗು ಮಲಗಿದ್ದನ್ನು ಗಮನಿಸದೇ ತಲೆ ಮೇಲೆ ಕಾರನ್ನು ಹತ್ತಿಸಿದ್ದಾನೆ. ಈ ವೇಳೆ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಇದನ್ನೂ ಓದಿ: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ
ಮಗುವಿನ ಮೇಲೆ ಕಾರು ಹತ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಚಾಲಕನ ವಿರುದ್ಧ ಹೈದರಾಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು