ಕಾರವಾರ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಹೊರಟಿದ್ದ ದಂಪತಿ ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಪಕ್ಕದಲ್ಲಿದ್ದ ಕೆರೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಅಮ್ಮಾಜಿ ಕೆರೆ ಬಳಿ ನಡೆದಿದೆ.
ಮುಂಡಗೋಡು ತಾಲೂಕಿನ ಅರಶಿಣಗೇರಿಯ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದು, ಇಂದು ಬೆಳಗ್ಗೆ ಅವರಿಬ್ಬರು ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆ ಅವರನ್ನು ನೋಡಲು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಇದನ್ನೂ ಓದಿ: 6 ತಿಂಗಳಲ್ಲಿ ಅಪ್ರಾಪ್ತೆ ಮೇಲೆ 400 ಮಂದಿ ರೇಪ್
Advertisement
Advertisement
ಕಾರು ಪಲ್ಟಿಯಾಗಿ ಕೆರೆಗೆ ಮಗುಚಿ ಬಿದ್ದ ಕಾರಣ ಕಾರಿನ ಡೋರ್ ತೆರೆಯಲಾರದೆ ದಂಪತಿ ಅಸುನೀಗಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ
Advertisement
Advertisement