ಕಲಬುರಗಿ: ಮಹಿಂದ್ರಾ ಪಿಕಪ್ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ನಗರದ ಹೊರವಲಯದ ಹಾರುತಿ ಹಡಗಿಲ್ ಬಳಿ ಸಂಭವಿಸಿದೆ.
ರಟಕಲ್ ಗ್ರಾಮ ಕಲಬುರಗಿಯ ಜನತಾ ಲೇಔಟ್ ನಿವಾಸಿ ಮುರಗೇಶ್ ಚಂದ್ರಶೇಖರ ಉಪ್ಪಿನ್ (42) ಹಾಗೂ ಶಹಾಬಾದ್ ನಿವಾಸಿ ಧೂಳಮ್ಮ ಯಮುನಪ್ಪ (60) ಮೃತ ದುರ್ದೈವಿಗಳು. ಇದನ್ನೂ ಓದಿ: Hassan| ಶಾಲೆಗೆಂದು ಮೀಸಲಿಟ್ಟಿದ್ದ ಜಾಗ ವಕ್ಫ್ ಹೆಸರಿಗೆ – ಹೆಚ್‌ಕೆ ಸುರೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕರೆ
ದುರ್ಘಟನೆಯಲ್ಲಿ ಪಿಕಪ್ ಜೀಪಿನ ಹಿಂಬದಿ ಕುಳಿತಿದ್ದ 25 ಮಂದಿ ಗಾಯಗೊಂಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್