ಚಾಮರಾಜನಗರ: ಮಗನ ಮದುವೆ ಸಡಗರದಲ್ಲಿದ್ದ ಮನೆಯೊಂದಕ್ಕೆ ಕಾರು ಡಿಕ್ಕಿ ಹೊಡೆದು ಜಗಲಿಯಲ್ಲಿ ಕುಳೀತಿದ್ದ ಮಹಿಳೆ ಸಾವನ್ನಪ್ಪಿ ಆಕೆಯ ಸಹೋದರಿಯರಿಬ್ಬರು ಗಾಯಗೊಂಡಿರುವ ಘಟನೆ ಚಾಮರಾಜನಗರ ಸಮೀಪ ಜಾಲಹಳ್ಳಿಹುಂಡಿಯಲ್ಲಿ ನಡೆದಿದೆ.
ಲಕ್ಷ್ಮಮ್ಮ (55) ಮೃತ ದುರ್ದೈವಿ. ಆರೋಪಿಯನ್ನು ರಾಜಪ್ಪ ಎಂದು ಗುರುತಿಸಲಾಗಿದೆ. ಲಕ್ಷ್ಮಮ್ಮ ತನ್ನ ಮಗನ ಮದುವೆ ಸಂಭ್ರಮದಲ್ಲಿ ಗ್ರಾಮದೇವರ ಹಬ್ಬ ಮಾಡಿ ಊರಿನವರಿಗೆಲ್ಲ ಊಟ ಹಾಕಿ ಬಳಿಕೆ ಜಗಲಿ ಮೇಲೆ ತನ್ನ ಅಕ್ಕತಂಗಿಯರೊಡನೆ ಕುಳಿತು ಎಲೆ ಅಡಿಕೆ ಹಾಕಿಕೊಳ್ಳುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಕಾರ್ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯಿಂದಾಗಿ ಲಕ್ಷ್ಮಮ್ಮನ ಸಹೋದರಿಯರಾದ ಸಾಕಮ್ಮ ಹಾಗು ದುಂಡಮ್ಮ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ತಡರಾತ್ರಿ ವಾಹನ ಚಾಲನೆ ಬಾರದ ರಾಜಪ್ಪ ಹಿಂಬದಿ ಗೇರ್‍ನಲ್ಲಿದ್ದ ಕಾರನ್ನು ಚಲಾಯಿಸಿದ್ದಾನೆ. ಈ ವೇಳೆ ಕಾರು ಹಿಂದಕ್ಕೆ ಹೋಗಿ ಲಕ್ಷ್ಮಮ್ಮನ ಮೇಲೆ ಹರಿದಿದೆ. ಕಾರ್ ಹರಿದ ಪರಿಣಾಮ ಮಹಿಳೆಯ ತಲೆ ಛಿದ್ರವಾಗಿ ಮನೆ ಮೇಲೆ ಹಾರಿಹೋಗಿದೆ. ಅಷ್ಟೆ ಅಲ್ಲದೆ ದುರ್ಘಟನೆ ಬಳಿಕ ವೇಗದಲ್ಲಿ ಚಲಿಸುತ್ತಿದ್ದ ಕಾರು ಮನೆಯ ಮೇಲ್ಛಾವಣಿ ಮೇಲೆ ಹೋಗಿ ನಿಂತಿದೆ. ಸದ್ಯ ಸ್ಥಳೀಯರು ಮೇಲ್ಛಾವಣಿಯಿಂದ ಕಾರನ್ನು ಕೆಳಕ್ಕಿಳಿಸಿದ್ದಾರೆ.
Advertisement
Advertisement
ಆರೊಪಿಯು ಘಟನೆ ಬಳಿಕ ಪರಾರಿಯಾಗಿದ್ದು, ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews