– ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಥಳೀಯರಿಂದ ತರಾಟೆ
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ (VC Canal) ಕಾರು ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ತಾಲೂಕಿನ ತಿಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾರು ಮಾಲೀಕ ಫಯಾಜ್ ಅಲಿಯಾಸ್ ಬ್ಯಾಟರಿ ಸಾವನ್ನಪ್ಪಿದ್ದು, ಅಸ್ಲಂ ಪಾಷ, ಪೀರ್ ಖಾನ್ ನಾಪತ್ತೆಯಾಗಿದ್ದಾರೆ. ಕಾರಿನಲ್ಲಿದ್ದ ನಯಾಜ್ ಎಂಬಾತನನ್ನ ರಕ್ಷಣೆ ಮಾಡಲಾಗಿದೆ. ಕಾರಿನಲ್ಲಿದ್ದ ನಾಲ್ವರು ಮಂಡ್ಯದ ಹಾಲಹಳ್ಳಿ ಸ್ಲಂನ ನಿವಾಸಿಗಳು ಎಂದು ಹೇಳಲಾಗಿದೆ. ಇದನ್ನೂ ಓದಿ: ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ – ವಿಪಕ್ಷಗಳ ವಿರುದ್ಧ ಸ್ಪೀಕರ್ ಗರಂ
ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಕಾರನ್ನು ಮೇಲೆತ್ತಿದ್ದಾರೆ. ನಾಲೆಗೆ ತಡೆಗೋಡೆ ಇಲ್ಲದ ಕಾರಣ ದುರಂತರ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿರುವ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕಾರಿನಲ್ಲಿ ಇದ್ದವರು ಮಂಡ್ಯದ ಹಾಲಹಳ್ಳಿ ಸ್ಲಂನವರು. ಓರ್ವ ಸಾವನ್ನಪ್ಪಿದ್ದಾನೆ. ಮತ್ತೋರ್ವನನ್ನ ರಕ್ಷಣೆ ಮಾಡಲಾಗಿದೆ. ಉಳಿದ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು
ಓವರ್‌ಟೇಕ್ ಮಾಡುವ ವೇಳೆ ಈ ಘಟನೆ ಜರುಗಿದೆ. ಸದ್ಯ ಅಗ್ನಿಶಾಮಕದಳದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ನೀರು ಹೆಚ್ಚಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುತ್ತಿದೆ. ನೀರನ್ನು ನಿಲ್ಲಿಸಲು ನೀರಾವರಿ ಇಂಜಿನಿಯರ್‌ಗೆ ತಿಳಿಸಿದ್ದೇವೆ. ಕೆಲವೊಂದು ಕಡೆ ತಡೆಗೋಡೆ ಇದೆ, ಕೆಲವು ಕಡೆ ಈಗ ನಿರ್ಮಾಣವಾಗುತ್ತಿದೆ. ಇನ್ನೂ ಕೆಲವೆಡೆ ತಡೆಗೋಡೆ ನಿರ್ಮಾಣವಾಗಿಲ್ಲ ಎಂದು ತಿಳಿಸಿದ್ದಾರೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತರಾಟೆ
ದುರಂತದ ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲವೂ ನಿಮ್ಮಿಂದಲೇ, ನೀವೇ ದುರಂತಕ್ಕೆ ಕಾರಣ ಅಂತ ಎಂಜಿನಿಯರ್ ಜಗದೀಶ್‌ಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.