ಮಂಗಳೂರು: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅಂತೆಯೇ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಸಮೀಪ ಹೊಳೆಗೆ ಕಾರೊಂದು ಬಿದ್ದ ಪ್ರಸಂಗ ನಡೆದಿದೆ.
Advertisement
ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಧ್ಯರಾತ್ರಿ ಭಾರೀ ವೇಗವಾಗಿ ಬಂದ ಕಾರು ಹೊಳೆಗೆ ಬಿದ್ದಿದೆ. ಘಟನೆಯ ದೃಶ್ಯವು ಬೈತಡ್ಕ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ಕುಮಾರಧಾರಾ ನದಿ ಸೇರುವ ಗೌರಿ ಹೊಳೆ ಕಟ್ಟಿರುವ ಸೇತುವೆ ಅಪಘಾತದ ವೇಗಕ್ಕೆ ತಡೆಬೇಲಿ ಜಖಂ ಆಗಿದೆ. ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಕಾರು ಮತ್ತು ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕೊಡಗಿನ ಚೆಂಬುವಿನಲ್ಲಿ ಇಂದೂ ಭೂಕಂಪನ- ಆತಂಕಕ್ಕೀಡಾದ ಜನ
Advertisement
ಕಾರು ಕಡಬ ತಾಲೂಕಿನ ಗುತ್ತಿಗಾರು ಮೂಲದ ಮಾರುತಿ-800 ಎಂಬ ಬಗ್ಗೆ ಮಾಹಿತಿ ಲಭಿಸಿದ್ದು, ಮೂವರು ಇದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬೋಟ್ ಮೂಲಕ ಶೋಧ ನಡೆಸುತ್ತಿರುವ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರು ನೀರಿನೊಳಗೆ ಮುಳುಗಿ ಹೋಗಿರುವ ಸಂಶಯ ವ್ಯಕ್ತ ವಾಗುತ್ತಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.