ನೆಲಮಂಗಲ: ಹೊಸ ವರ್ಷದ ಹಿನ್ನೆಲೆ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು, ಬೈಕ್‌ನಲ್ಲಿದ್ದ ಕುಟುಂಬದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಅಶ್ವಿನಿ ಸಾವಿಗೀಡಾದ ದುರ್ದೈವಿ. ನೆಲಮಂಗಲ (Nelamangala) ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಕ್ಕೇನಹಳ್ಳಿ ಬಳಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಸಾರಿಗೆ ನೌಕರರಿಗೆ ಶಾಕ್
ತೊರೆ ಮೂಡಲಪಾಳ್ಯ ನಿವಾಸಿಗಳಾದ ಅಶ್ವಿನಿ ಮತ್ತು ರಮೇಶ್ ದಂಪತಿ ತಮ್ಮ 2ನೇ ಮಗನ ಜೊತೆ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಶ್ವಿನಿ ತಲೆಯ ಭಾಗಕ್ಕೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಮೇಶ್ ಹಾಗೂ ಅಶ್ವಿನಿ ಕಳೆದ 8 ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಎರಡನೇ ಮಗನನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ ರಮೇಶ್ ಹಾಗೂ ಆಶ್ವಿನಿ ಬೈಕ್‌ನಲ್ಲಿ ವಾಪಸ್ ಆಗುತ್ತಿದ್ದರು. ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುವ ವೇಳೆ ಓವರ್ ಸ್ಪೀಡ್‌ನಲ್ಲಿದ್ದ ಇಕೋ ಕಾರ್ ಪಲ್ಟಿಯಾಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಮೇಶ್ ಹಾಗೂ ಯವನ್ ಬಚಾಬ್ ಆಗಿದ್ದಾರೆ. ಆದರೆ, ಅಶ್ವಿನಿಗೆ ಗಂಭೀರವಾಗಿ ಪೆಟ್ಟು ಬಿದ್ದು ಅಸುನೀಗಿದ್ದಾರೆ. ಇದನ್ನೂ ಓದಿ: ಸ್ವಿಸ್ ಸ್ಕೀ ರೆಸಾರ್ಟ್‌ನ ಬಾರ್‌ನಲ್ಲಿ ಸ್ಫೋಟ: ಹಲವರು ಸಾವು

