ಚೀನಾ: ರಸ್ತೆ ದಾಟುತ್ತಿದ್ದಾಗ ತಾಯಿಯ ಅಜಾಗರೂಕತೆಯಿಂದಾಗಿ ಮಗುವಿಗೆ ಕಾರ್ ಡಿಕ್ಕಿಯಾದ ಘಟನೆ ದಕ್ಷಿಣ ಚೀನಾದ ಬೈಸ್ ನಗರದಲ್ಲಿ ನಡೆದಿದೆ.
ಈ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಏನಿದು ಘಟನೆ?: ತಾಯಿಯೊಬ್ಬಳು ರಸ್ತೆ ದಾಟಲೆಂದು ತನ್ನ ಮಗುವಿನ ಕೈ ಹಿಡಿದುಕೊಂಡು ನಿಂತಿದ್ದಳು. ಇದೇ ವೇಳೆ ಆಕೆ ಮಗುವಿನ ಕೈ ಬಿಟ್ಟು ತನ್ನ ಫೋನಿನ ಕಡೆ ಗಮನಹರಿಸುತ್ತಾಳೆ. ತಾಯಿಯ ಕೈ ಬಿಟ್ಟ ಮಗು ಆರಾಮವಾಗಿ ರಸ್ತೆ ದಾಟಿದೆ. ಅಲ್ಲದೇ ಇನ್ನೊಂದು ಬಾಲಕನ ಜೊತೆ ಆಟವಾಡುತ್ತಾ ಇತ್ತು.
Advertisement
ರಸ್ತೆ ದಾಟಿ ಬಂದ ಮಗು ಬಳಿಕ ತನ್ನ ತಾಯಿಯನ್ನು ತನ್ನ ಕಡೆ ಬರುವಂತೆ ಜೋರಾಗಿ ಕರೆದಿದೆ. ಆದ್ರೆ ತಾಯಿ ಮಾತ್ರ ತನ್ನ ಫೋನಿನಲ್ಲಿ ಮಗ್ನನಾಗಿದ್ದಳು. ಅಲ್ಲದೇ ಸ್ವಲ್ಪ ಸಮಯದ ಬಳಿಕ ಆಕೆ ರಸ್ತೆ ದಾಟಲು ಮುಂದಾಗಿದ್ದಳು. ಈ ವೇಳೆ ಇತ್ತ ಈಗಾಗಲೇ ರಸ್ತೆ ದಾಟಿ ಬಂದಿದ್ದ ಮಗು ಮತ್ತೆ ತನ್ನ ತಾಯಿಯತ್ತ ಓಡಿದೆ. ಪರಿಣಾಮ ಎಡಗಡೆಯಿಂದ ಬರುತ್ತಿದ್ದ ಕಾರ್ ಮಗುವಿಗೆ ಡಿಕ್ಕಿ ಹೊಡೆದಿದೆ.
Advertisement
Advertisement
ಕಾರು ನಿಧಾನವಾಗಿ ಚಲಿಸುತ್ತಿದ್ದುದರಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗುವಿಗೆ ಕಾರ್ ಡಿಕ್ಕಿಯಾಗುತ್ತಿದ್ದಂತೆಯೇ ಎಚ್ಚೆತ್ತ ತಾಯಿ, ಅದರತ್ತ ಓಡಿ ಬಂದು ಎಬ್ಬಿಸಿದ್ದಾಳೆ. ಈ ಎಲ್ಲಾ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಂಘೈ ವೆಬ್‍ಸೈಟ್ ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಹಾಕಿ `ವರ್ಷದ ಅತೀ ಕೆಟ್ಟ ತಾಯಿಗೆ ಮತ್ತೊಂದು ಬಲವಾದ ಸ್ಪರ್ಧಿ’ ಎಂದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೋ ನೋಡಿದ ಪ್ರತಿಯೊಬ್ಬರು ತಾಯಿಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 10,000 ಕ್ಕಿಂತ ಹೆಚ್ಚು ಮಕ್ಕಳು ಚೀನಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದ್ದಾರೆ.