Connect with us

Latest

ಫ್ಲೈಓವರ್‍ನಿಂದ ಬಿದ್ದ ಹೋಂಡಾ ಸಿಟಿ ಕಾರು- ಪರೀಕ್ಷೆಗೆ ಹೋಗ್ತಿದ್ದ 7 ವಿದ್ಯಾರ್ಥಿಗಳಲ್ಲಿ ಇಬ್ಬರ ಸಾವು

Published

on

ನವದೆಹಲಿ: ಫ್ಲೈಓವರ್ ನಿಂದ ಹೋಂಡಾ ಸಿಟಿ ಕಾರೊಂದು ಕೆಳಗೆ ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಪಶ್ಚಿಮ ದೆಹಲಿಯ ಪಂಜಾಬಿ ಭಾಗ್ ಬಳಿ ನಡೆದಿದೆ.

ಅಪಘಾತಕ್ಕೀಡಾದ ಕಾರಿನಲ್ಲಿದ್ದ 7 ಮಂದಿ ದೆಹಲಿ ಇನ್ಸ್ ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್ ಅಂಡ್ ರಿಸರ್ಚ್‍ನ ವಿದ್ಯಾರ್ಥಿಗಳಾಗಿದ್ದು ಪರೀಕ್ಷೆ ಬರೆಯಲು ಹೋಗ್ತಿದ್ರು ಎಂದು ಪೊಲೀಸರು ಹೇಳಿದ್ದಾರೆ.

ಅತೀ ವೇಗವಾಗಿ ಕಾರು ಚಾಲನೆ ಮಾಡಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಫ್ಲೈಓವರ್ ಪಕ್ಕದಿಂದ ಕೆಳಗೆ ಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಲ್ಲಿ ಸಂಚಿತ್ ಎಂಬ ವಿದ್ಯಾರ್ಥಿ ಕಾರಿನ ಛಾವಣಿ ಮತ್ತು ಸೀಟಿನ ಮಧ್ಯೆ ಅಪ್ಪಚ್ಚಿಯಾಗಿದ್ದಾನೆ. ಇನ್ನು ಕಾರಿನಲ್ಲಿದ್ದ ಇಬ್ಬರು ಯುವತಿಯರಲ್ಲಿ ರಿತು ಎಂಬಾಕೆ ಸಾವನ್ನಪ್ಪಿದ್ದಾಳೆ.

ಗಾಯಾಳುಗಳನ್ನ ಪ್ರಣವ್, ಗರಿಮಾ, ರಿಷಬ್, ರಜತ್ ಹಾಗೂ ರಾಜಾ ಎಂದು ಗುರುತಿಸಲಾಗಿದೆ. ರಜತ್ ಕಾರು ಚಾಲನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳು ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಹೋಗ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಹಾಲ್ ಟಿಕೆಟ್ ಹಾಗೂ ಪುಸ್ತಕಗಳು ಪತ್ತೆಯಾಗಿವೆ.

ಸಂಪುರ್ಣ ನಜ್ಜುಗುಜ್ಜಾಗಿದ್ದ ಕಾರಿನಿಂದ ವಿದ್ಯಾರ್ಥಿಗಳನ್ನು ಹೊರಗೆಳೆಯಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಸದ್ಯ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *