ಅಮರಾವತಿ: ಆಂಧ್ರಪ್ರದೇಶದ(Andra Pradesh) ಅನ್ನಮಯ್ಯ ಜಿಲ್ಲೆಯ ಬಾಲಂವರಿಪಲ್ಲಿ(Balamvaripalli) ಗ್ರಾಮದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಕರ್ನಾಟಕದ(Karnataka) ಮೂವರು ಮೃತಪಟ್ಟಿದ್ದಾರೆ
ಮೃತರನ್ನು ಕರ್ನಾಟಕದ ಚಿಂತಾಮಣಿ(Chintamani) ಬಳಿಯ ತಂಡುಪಲ್ಲಿ ಮೂಲದವರಾದ ಲೋಕೇಶ್, ಚಲಪತಿ ಮತ್ತು ಶಿವಣ್ಣ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 2006ರಲ್ಲಿ RSS ಕಚೇರಿ ಮೇಲಿನ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ
ತಂಡುಪಲ್ಲಿಯ(Tandupalli) ಐವರು ಮದುವೆ ಸಮಾರಂಭಗಳಿಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಹಾಗೆಯೇ ಶನಿವಾರ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಮದುವೆಯಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಲಂವರಿಪಲ್ಲಿಯಲ್ಲಿ ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಕಾರಿನಲ್ಲಿದ್ದ ಐದು ಪ್ರಯಾಣಿಕರಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುನಿಲ್ ಹಾಗೂ ತಿಪ್ಪಾ ರೆಡ್ಡಿ ಕಾರಿನ ಹಿಂಭಾಗದ ಕಿಟಕಿಗಳನ್ನು ಒಡೆದು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಕಾರನ್ನು ಬಾವಿಯಿಂದ ಹೊರತೆಗೆದರು. ಘಟನೆಯ ಕುರಿತು ಪಿಲೇರು ಪೊಲೀಸ್ ಠಾಣೆಯಲ್ಲಿ(Pileru Police Station) ಪ್ರಕರಣ ದಾಖಲಾಗಿದೆ.