ಚಿಕ್ಕಮಗಳೂರು: ಸೈರನ್ ಹಾಕಿಕೊಂಡು, ಎಷ್ಟೇ ಹಾರ್ನ್ ಮಾಡಿದರೂ ಅಂಬುಲೆನ್ಸ್‌ಗೆ ದಾರಿ ಬಿಡದೇ ಮಂಗಳೂರು ನೋಂದಣಿಯ ಕಾರು ಚಾಲಕ ಅಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‍ನಲ್ಲಿ ನಡೆದಿದೆ.
ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ 45 ವರ್ಷದ ಅಮಿರ್‍ಜಾನ್ ಎಂಬುವರನ್ನು ಗುರುವಾರ ಮಧ್ಯಾಹ್ನ ಚಿಕ್ಕಮಗಳೂರಿನಿಂದ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಬಿಸಿರೋಡ್ ಬಳಿ ಕೆಎ 19 ಮಂಗಳೂರು ನೋಂದಣಿಯ ಕಾರು ಚಾಲಕನೊಬ್ಬ ಸುಮಾರು 10 ಕಿ.ಮೀ. ಅಂಬುಲೆನ್ಸ್‍ಗೆ ದಾರಿ ಬಿಡದೇ ಸತಾಯಿಸಿದ್ದಾನೆ.
Advertisement
Advertisement
ಅಂಬುಲೆನ್ಸ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯನ್ನು ಬಹುಬೇಗ ಆಸ್ಪತ್ರೆಗೆ ದಾಖಲಿಸಲು ಚಾಲಕ ತೀವ್ರ ಪ್ರಯತ್ನ ಪಟ್ಟಿದ್ದು, ವಾಹನ ಸೈರನ್ ಹಾಕಿದ್ದರೂ ಕಾರು ಚಾಲಕ ಮಾತ್ರ ದಾಡಿ ಬಿಡಲೇ ಇಲ್ಲ. ಅಂಬುಲೆನ್ಸ್ ಸೈರನ್ ಕೇಳಿ ನೂರಾರು ವಾಹನಗಳು ದಾರಿ ಬಿಟ್ಟರೂ ಚಾಲಕ ಮಾತ್ರ ದಾರಿ ಬಿಟ್ಟಿಲ್ಲ. ಈ ಕುರಿತು ಮಾಹಿತಿ ನೀಡಿದ ಅಂಬುಲೆನ್ಸ್ ಚಾಲಕ ಬಿ.ಸಿ.ರೋಡ್‍ನಿಂದ ಐದು ಕಿ.ಮೀ. ಹಿಂದೆ ನಿಂತಿದ್ದ ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಂಗಳೂರು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿದ್ದಾರೆ.
Advertisement
ಅಂಬುಲೆನ್ಸ್‌ಗೆ ದಾರಿ ಬಿಡದೇ ಅಮಾನವೀಯತೆ ಮೆರೆದ ಕಾರು ಚಾಲಕನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಹಲವರು ಕಾರು ಚಾಲಕನ ವರ್ತನೆಗೆ ವಿರುದ್ಧ ಕಿಡಿಕಾರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=XXGYCOFBuss