ಮಂಡ್ಯ: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಬೆಂಕಿಯಿಂದ ಹೊತ್ತಿ ಉರಿದಿರುವ ಘಟನೆ ಮಂಡ್ಯ ನಗರದಲ್ಲಿ ಜರುಗಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಚಲಿಸುತ್ತಿದ್ದ ಹುಂಡೈ ಕಂಪನಿಯ ಕಾರಿನ ಡಿಸೇಲ್ ಟ್ಯಾಂಕ್‍ನಿಂದ ಡಿಸೇಲ್ ಸೋರಿಕೆಯಾಗಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ವಾಹನ ಸವಾರರು ಕಾರು ಚಾಲಕನಿಗೆ ತಿಳಿಸಿದ್ದಾರೆ. ನಂತರ ಕಾರಿನಿಂದ ಕೆಳಗೆ ಇಳಿದು ಕಾರು ಚಾಲಕ ನೋಡಿದ್ದಾನೆ.
Advertisement
Advertisement
ಚಾಲಕ ಇಳಿಯುವಷ್ಟರಲ್ಲಿ ಕಾರು ಹೀಟ್ ಆಗಿದ್ದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ನಂತರ ಕಾರು ಬೆಂಕಿಯಿಂದ ಹೊತ್ತಿ ಉರಿದಿದೆ. ಬಳಿಕ ಅಲ್ಲಿಯೇ ಇದ್ದ ಟ್ಯಾಂಕರ್ ನಿಂದ ಕಾರಿಗೆ ನೀರು ಹಾರಿಸಿ ಬೆಂಕಿಯನ್ನು ಆರಿಸಲು ಯತ್ನಿಸಿದ್ದಾರೆ. ಆದರೆ ಬೆಂಕಿ ಆರಲಿಲ್ಲ.
Advertisement
ಬೆಂಕಿ ಆರಿದಿದ್ದಾಗ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿನ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿ ಆಗಿದ್ದಾರೆ.