ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ (Car Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸಮೇತ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆ ಬಾವಿ ಬಳಿ ನಡೆದಿದೆ.
Advertisement
ಪಾಂಡಿಚೇರಿಗೆ ಪ್ರವಾಸ ಹೋಗಿ ವಾಪಾಸ್ ಬರ್ತಿದ್ದ ತುಮಕೂರಿನ ಪಾವಗಡದ ರೊಪ್ಪ ಗ್ರಾಮದ ಪವನ್ ಹಾಗೂ ಮಮತಾ ದಂಪತಿ ಸೇರಿದಂತೆ ಅವರ ಮಕ್ಕಳಾದ ವಿಶ್ವಾಸ್ ಹಾಗೂ ಶುಭ್ರತ್ ಗಾಯಗೊಂಡವರು. ಘಟನೆಯಲ್ಲಿ ಓರ್ವ ಮಗನ ಪರಿಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ!
ಹುಲ್ಲು ಸಾಗಿಸುತ್ತಿದ್ದ ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಹುಲ್ಲು ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಕ್ಯಾಂಟರ್ ಮೂಲಕ 250 ಹೊರೆ ಹುಲ್ಲನ್ನ ವಿಜಯಪುರಕ್ಕೆ ಸಾಗಾಟ ಮಾಡಲಾಗುತ್ತಿದ್ದು ಗ್ರಾಮದಲ್ಲಿ ಹಾದು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಹುಲ್ಲು ಹೊತ್ತಿ ಉರಿದು ಬೆಂಕಿಯ ಜೊತೆಗೆ ದಟ್ಟ ಹೊಗೆ ಆವರಿಸಿದೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಗ್ರಾಮಸ್ಥರು ಮನೆಗಳಲ್ಲಿ ಇದ್ದ ನೀರನ್ನೆಲ್ಲಾ ತಂದು ಬೆಂಕಿ ನಂದಿಸಲು ಹರಸಾಹಪಟ್ಟಿದ್ದಾರೆ.
ಇನ್ನೂ ಶಾಲೆಯ ಪಕ್ಕದಲ್ಲೇ ಘಟನೆ ನಡೆದಿದ್ದು ಕೆಲಕಾಲ ಆತಂಕದ ವಾತವಾರಣವೂ ನಿರ್ಮಾಣವಾಗಿದೆ. ಹೊಗೆಯಿಂದ ಮಕ್ಕಳು ಸಹ ಪರದಾಡಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಸರಗಳ್ಳತನ
ನಿನ್ನೆ ವಿಜೃಂಭಣೆಯಿಂದ ನೇರವೇರಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮರಥೋತ್ಸವದಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ನಗರದ ನಿವಾಸಿ ಅಕ್ಕಾಯಮ್ಮ ಎಂಬಾಕೆ ದೇವರ ದರ್ಶನ ಪಡೆದು ವಾಪಾಸ್ ಬರಲು ಬಸ್ ಹತ್ತುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಲಾಗಿದೆ. ಸರಿಸುಮಾರು 40 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಲಾಗಿದೆ ಅಂತ ಅಕ್ಕಾಯಮ್ಮ ಇಂದು ತಡವಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.