ನೆಲಮಂಗಲ: ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಡಾಬಸ್ ಪೇಟೆ (Dabaspet) ಬಳಿಯ ಅಂಚೆಮನೆ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಬೆಂಗಳೂರಿನ ಮಲ್ಲೇಶ್ವರಂ (Malleshwaram) ಮೂಲದ ಒಂದೇ ಕುಟುಂಬದ ಮೂವರಾದ ತಾಯಿ ಶಶಿಕಲಾ (55), ಮಗಳು ದೀಪಿಕಾ (35) ಹಾಗೂ ತಂದೆ ಗೋಪಾಲ್ (60) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:
ಕಾರಿನಲ್ಲಿ ಐವರು ಬೆಂಗಳೂರು (Bengaluru) ಮಾರ್ಗವಾಗಿ ತುಮಕೂರಿನಲ್ಲಿ (Tumakuru) ನಾಮಕರಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಡಾಬಸ್ ಪೇಟೆ ಬಳಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ಗೋಪಾಲ್ ಎಂಬುವವರು ಸಾವನ್ನಪ್ಪಿದ್ದಾರೆ.
ಅಪಘಾತದ ವೇಳೆ ಗುಬ್ಬಿ (Gubbi) ಜೆಡಿಎಸ್ (JDS) ಮುಖಂಡ ಸಿಎಸ್‌ಪುರ ನಾಗರಾಜು ಅವರು ಇಬ್ಬರು ಮಕ್ಕಳನ್ನು ಅಪಘಾತದಿಂದ ಪಾರು ಮಾಡಿದ್ದು, ತಮ್ಮ ಕಾರಿನಲ್ಲಿಯೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಮೂವರ ಮೃತದೇಹವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನಿಸಲಾಗಿದೆ.ಇದನ್ನೂ ಓದಿ: