Wednesday, 18th July 2018

ಡಿವೈಡರ್ ದಾಟಿ ಕ್ಯಾಂಟರ್‍ಗೆ ಕಾರು ಡಿಕ್ಕಿ – ಇಬ್ಬರು ಯುವತಿಯರು ಸೇರಿ ನಾಲ್ವರ ದುರ್ಮರಣ

ರಾಮನಗರ: ಕಾರು-ಕ್ಯಾಂಟರ್ ನಡುವೆ ಡಿಕ್ಕಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಕೆಂಪನಹಳ್ಳಿ ಗೇಟ್ ಬಳಿ ನಡೆದಿದೆ.

ಕಾರಿನಲ್ಲಿದ್ದ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಮೃತರೆಲ್ಲ ಸುಮಾರು 23 ರಿಂದ 26 ವಯಸ್ಸಿನವರಾಗಿದ್ದು, ಕೇರಳ ಮೂಲದವರು ಎನ್ನಲಾಗಿದೆ.

ಮೃತರನ್ನು ಜೋಯದ್ ಜಾಕಬ್, ಜೀನಾ, ದಿವ್ಯಾ ಹಾಗೂ ನಿಖಿತ್ ಎಂದು ಗುರುತಿಸಲಾಗಿದೆ. ಜೋಯದ್ ಜಾಕಬ್ ಮತ್ತು ದಿವ್ಯ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು. ಜೀನಾ, ನಿಖಿತ್ ವೆಲ್ಲೂರಿನ ವಿಐಟಿಯು ಕಾಲೇಜಿನವರು ಎಂದು ಹೇಳಲಾಗಿದೆ.

ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕೆಎ-53 ಎಎಂ-1801 ನಂಬರಿನ ವರ್ನಾ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಿಂದ ಬರ್ತಿದ್ದ ಎಚ್‍ಆರ್-55 ವೈ-5331 ನಂಬರಿನ ಕ್ಯಾಂಟರ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಲಾರಿಯ ಕೆಳಗೆ ಕಾರು ಸಿಲುಕಿ ನಾಲ್ವರೂ ಸಾವನ್ನಪ್ಪಿದ್ದಾರೆ.

ರಾಮನಗರ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *