ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಸೋಮವಾರ ಮತ್ತೆ ಕೊಲೆ ಬೆದರಿಕೆ ಸಂದೇಶ ಬಂದಿದೆ. ವಿಷಯ ತಿಳಿದು ನಟನ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ (Galaxy Apartments) ನುಗ್ಗಿ ಅವರ ಕಾರನ್ನು ಬಾಂಬ್‌ನಿಂದ ಸ್ಫೋಟಿಸುವ ಮೂಲಕ ಕೊಲ್ಲುವುದಾಗಿ ವರ್ಲಿಯಲ್ಲಿರುವ ಸಾರಿಗೆ ಇಲಾಖೆ ವಾಟ್ಸಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬೆದರಿಕೆಯ ಹೊಣೆಯನ್ನೂ ಯಾರೂ ಹೊತ್ತುಕೊಂಡಿಲ್ಲ. ಸಲ್ಮಾನ್ ಖಾನ್ ಅವರಾಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ; ಬಿ-ರಿಪೋರ್ಟ್ ಸಲ್ಲಿಕೆ
ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಸಂಖ್ಯೆ 118/25 ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351(2)(3) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆದರಿಕೆ ಸಂದೇಶದ ಮೂಲ ಮತ್ತು ಅದರ ಸತ್ಯಾಸತ್ಯತೆಯ ಬಗ್ಗೆ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ, ಆರೋಪಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಕಳೆದ ಕೆಲವು ವರ್ಷಗಳಿಂದ, ಬಾಲಿವುಡ್ ನಟನಿಗೆ 1998 ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವಾರು ಬೆದರಿಕೆಗಳು ಬಂದಿವೆ. ಕಳೆದ ವರ್ಷ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಹೊರಗೆ ಇಬ್ಬರು ದುಷ್ಕರ್ಮಿಗಳು ಮೋಟಾರ್ ಬೈಕಿನಲ್ಲಿ ಬಂದು ಗುಂಡು ಹಾರಿಸಿದ್ದರು.
ಈ ಘಟನೆ ಬಳಿಕ ಸಲ್ಮಾನ್‌ಗೆ Y+ ಭದ್ರತೆಯನ್ನು ಒದಗಿಸಲಾಗಿದೆ. ಸಲ್ಮಾನ್ ಖಾನ್‌ರ ಭದ್ರತೆಗಾಗಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮನೆಯ ಗಾಜಿನ ಕಿಟಕಿಗಳನ್ನು ಬುಲೆಟ್‌ಪ್ರೂಫ್‌ನಿಂದ ಬದಲಾಯಿಸಲಾಗಿದೆ ಮತ್ತು CCTV ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್ ಗೌಡ3
ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ
ಕಳೆದ ವರ್ಷ ನಟನ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೆಳಗ್ಗಿನ ಜಾವ ಸುಮಾರು 5 ಗಂಟೆ ವೇಳೆಯಲ್ಲಿ ದಾಳಿ ನಡೆದಿತ್ತು. ದಾಳಿಕೋರರು ಒಟ್ಟು 5 ಸುತ್ತು ಗುಂಡು ಹಾರಿಸಿದ್ದರು. ಈ ಪೈಕಿ ಸಲ್ಮಾನ್ ಮನೆ ಕಡೆಗೆ 4 ಗುಂಡು ಹಾರಿಸಲಾಗಿತ್ತು, 1 ಗುಂಡು ಗುಂಡು ನೆಲಕ್ಕೆ ಬಿದ್ದಿತ್ತು. 7.65 ಎಂಎಂ ಬೋರ್ ಪಿಸ್ತೂಲ್‌ನಿಂದ ಈ ಗುಂಡಿನ ದಾಳಿ ನಡೆಸಲಾಗಿತ್ತು. ಅದೃಷವಶಾತ್ ಸಲ್ಮಾನ್ ಖಾನ್ ಅಂದು ಮನೆಯಲ್ಲೇ ಇದ್ದರೂ ಯಾವುದೇ ಅಪಾಯ ಸಂಭವಿಸಿರಲಿಲ್ಲ ಎಂಬಹುದು ಗಮನಾರ್ಹ. ಇದನ್ನೂ ಓದಿ: ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್