ತುಮಕೂರು: ಇಂಡಿಕಾ ಕಾರು (Car) ಮತ್ತು ಕ್ಯಾಂಟರ್ (Canter) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು (Tumkur) ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಕೊಂಡ್ಲಿ ಕ್ರಾಸ್‌ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವಿನಹಳ್ಳಿಯ ರಾಮಣ್ಣ (58), ನಾರಾಯಣಪ್ಪ (54), ಸಾಗರ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸದೆ ನಾಗರತ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ
ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತವಾಗಿದೆ. ತುಮಕೂರು ಕಡೆಯಿಂದ ಕೆ.ಬಿ ಕ್ರಾಸ್ ತೆರಳುತ್ತಿದ್ದ ಕ್ಯಾಂಟರ್ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಕಾರು ಕೆ.ಬಿ.ಕ್ರಾಸ್‌ನಿಂದ ತುಮಕೂರಿಗೆ ತೆರಳುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ