ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರು ಅಪಘಾತ (Car Accident) ಪ್ರಕರಣ ಬಗ್ಗೆ ಮತ್ತೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayana Swamy) ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಿ ಕಾರಿನ ಗಾಜುಗಳು ಒಡೆದಿದೆ. ಆದರೆ ಅದನ್ನು ಬಟ್ಟೆ ಹಾಕಿ ಮುಚ್ಚಲಾಗಿದೆ. ಕಾರನ್ನು ಬಟ್ಟೆಯಿಂದ ಮುಚ್ಚಿದ್ದು ಯಾಕೆ? ತಕ್ಷಣ ಯಾಕೆ ಕಾರನ್ನು ಸ್ಥಳದಿಂದ ಸಾಗಿಸಲಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದೇಹದ ಮೇಲೆ ತರಕಾರಿ ಬಿದ್ದಿತ್ತು, 1 ಗಂಟೆ ನಂತ್ರ ಜನ ಇರೋದು ಗೊತ್ತಾಯ್ತು- 9 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ರು: ಎಸ್‌ಪಿ
Advertisement
Advertisement
ಕಾರಿನಲ್ಲಿ ಕೋಟ್ಯಂತರ ರೂ. ಸಾಗಿಸಲಾಗುತ್ತಿತ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ತನಿಖೆ ಮಾಡುತ್ತಿರುವುದು ಯಾರು? ಡ್ರೈವರ್ ಎಲ್ಲಿ ಎಂದು ಪ್ರಶ್ನಿಸಿದರು.
Advertisement
ನಾಯಿ ಅಡ್ಡ ಬಂತು ಅಂತ ಮೊದಲು ಹೇಳಿದ್ದೀರಿ. ನಂತರ ಹಿಟ್ ಅಂಡ್ ರನ್ ಆಗಿದೆ ಎನ್ನಲಾಗಿತ್ತು. ಬಳಿಕ ಚಾಲಕನಿಗೆ ನಿದ್ದೆ ಬಂದಿತ್ತು ಎಂಬ ಸುದ್ದಿ ಬಂತು. ಹೆಬ್ಬಾಳ್ಕರ್ ಯಾಕೆ ಸರ್ಕಾರಿ ಕಾರಲ್ಲಿ ಹೋಗಲಿಲ್ಲ, ಗನ್ ಮ್ಯಾನ್, ಎಸ್ಕಾರ್ಟ್ ತಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
Advertisement
ಅಪಘಾತ ಪ್ರಕರಣದಲ್ಲಿ ಬಹಳ ಅನುಮಾನಗಳಿವೆ, ಸರ್ಕಾರ ಉತ್ತರ ಕೊಡದಿದ್ದರೆ ಅನುಮಾನಗಳೇ ಸತ್ಯ ಆಗುತ್ತವೆ. ಈ ವಿಚಾರಗಳ ಬಗ್ಗೆ ತನಿಖೆ ಆಗತ್ಯ ಎಂದು ಛಲವಾದಿ ಆಗ್ರಹಿಸಿದರು.