ತುಮಕೂರು: ಕಾರು ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಗೂಳೂರು ಬಳಿಯ ಪೋದಾರ್ ಶಾಲೆ ಬಳಿ ನಡೆದಿದೆ.
ವಿನೂತಾ (28) ಮೃತಪಟ್ಟ ಮಹಿಳೆಯಾಗಿದ್ದಾರೆ. ಕಾರಿನಲ್ಲಿದ್ದ ವಿನೂತಾ ಅವರ ಪತಿ ರಾಘವೇಂದ್ರ ಹಾಗೂ 4 ವರ್ಷದ ಮಗಳು ಶ್ರಾವ್ಯ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
Advertisement
ರಾಘವೇಂದ್ರ ಅವರು ಇಂದು ಬೆಳಗ್ಗ ಪತ್ನಿ ವಿನೂತಾ ಹಾಗೂ ಮಗಳು ಶ್ರಾವ್ಯ ಜೊತೆಗೆ ಕಾರಿನಲ್ಲಿ ತೋಟಕ್ಕೆ ಹೋಗುತ್ತಿದ್ದರು. ಈ ವೇಳೆ ಗೂಳೂರು ಬಳಿಯ ಪೋದಾರ್ ಶಾಲೆ ಸಮೀಪದಲ್ಲಿ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿದೆ. ಪರಿಣಾಮ ಕಾರಿನ ಮುಂದಿನ ಸೀಟ್ನಲ್ಲಿ ಕುಳಿತ್ತಿದ್ದ ವಿನೂತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಕಾರನ್ನು ಚಾಲನೆ ಮಾಡುತ್ತಿದ್ದ ರಾಘವೇಂದ್ರ ಹಾಗೂ ಶ್ರಾವ್ಯ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಗಾಯಗೊಂಡಿದ್ದ ರಾಘವೇಂದ್ರ ಹಾಗೂ ಶ್ರಾವ್ಯ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.