ಚಿಕ್ಕಬಳ್ಳಾಪುರ: ಗೌರಿಬಿದನೂರಿನ (Gauribidanur) ಬೈಪಾಸ್ ಗಣೇಶ ವಿಸರ್ಜನೆ (Ganesha Immersion) ವೀಕ್ಷಿಸಲು ಹೊರಟ ಇಬ್ಬರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಬಂಡೆ ಗ್ರಾಮದ ಸಮೀಪ ನಡೆದಿದೆ.
ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ವಡ್ಡರಬಂಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ನೀಲಗಿರಿ ಮರದೊಳಗೆ ತೂರಿಕೊಂಡಿದೆ. ಕಾರಿನಲ್ಲಿದ್ದ ಮಂಚೇನಹಳ್ಳಿ ವಾಸಿ ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್‌ಡಿಎ ಶಶಿ (42) ಹಾಗೂ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು (28) ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಮಂಚೇನಹಳ್ಳಿಯ ಮುಕ್ಕಡಿಪೇಟೆಯ ರಮೇಶ್ (40) ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಎರಡು ದಿನಗಳ ವರ್ಣರಂಜಿತ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೆರೆ
ಮಂಚೇನಹಳ್ಳಿಯಿಂದ ಗೌರಿಬಿದನೂರಿನತ್ತ ಸಾಗುವಾಗ ವಡ್ಡರ ಬಂಡೆ ಬಳಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿಯಾಗಿದೆ. ಮೃತ ಶಶಿ ಅವರ ಪತ್ನಿ ನಾಜಿಯಾ ಈ ಬಗ್ಗೆ ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಇಂದು ಗೌರಿಬಿದನೂರು ಬೈಪಾಸ್ ಗಣೇಶನ ಗಂಗಾವೀಲೀನ ಕಾರ್ಯ ವಿಜೃಂಭಣೆಯಿಂದ ನೇರವೇರಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕ್ – ಸೂರ್ಯ ಪಡೆ ಗೆಲುವಿಗೆ ಬೇಕು 128 ರನ್