ಬೀದರ್: ಕಾರು (Car) ನಿಯಂತ್ರಣ ತಪ್ಪಿ ಅಪಘಾತವಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಚಿಟಗುಪ್ಪ (Chitaguppa) ತಾಲೂಕಿನ ಉಡಬಾಳ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ಅತಿ ವೇಗವಾಗಿ ಬಂದ ಪರಿಣಾಮ ನಿಯಂತ್ರಣ ಸಿಗದೇ ಕಾರು ನಾಲ್ಕೈದು ಬಾರಿ ಪಲ್ಟಿಯಾಗಿ ರಸ್ತೆ ಬದಿಗೆ ಬಂದು ಬಿದ್ದಿದೆ. ಘಟನೆಯಲ್ಲಿ ಉಮೇಶ್ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಡುಬಾಳ ಗ್ರಾಮದಿಂದ ಮನ್ನಾಏಖೇಳಿಗೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಹಾವೇರಿ | ಹಿಂದೂ ಯುವತಿ ಸ್ವಾತಿ ಹತ್ಯೆ ಖಂಡಿಸಿ ಮಾ.17 ರಂದು ಮಾಸೂರು ಬಂದ್‌ಗೆ ಕರೆ
ಯುವಕನ ಮೃತದೇಹವನ್ನು ಚಿಟಗುಪ್ಪ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬೆಮ್ಮಳಖೇಡಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೆಮ್ಮಳಕೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಜಗದೋದ್ಧಾರನಾ ಆಡಿಸಿದಳು ಯಶೋಧೆ’ ಹಾಡು ಹಾಡಿದ ಸಂಸದ ತೇಜಸ್ವಿ ಸೂರ್ಯ ಪತ್ನಿ