ಬೆಂಗಳೂರು: ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಕೂದಲೆಳೆ ಅಂತರದಲ್ಲೇ ಭಾರೀ ಅನಾಹುತವೊಂದು ತಪ್ಪಿದೆ.
Advertisement
ದೇವೇಗೌಡ ಪೆಟ್ರೋಲ್ ಸಮೀಪ ಕಾರು ಡಿವೈಡರ್ಗೆ ಡಿಕ್ಕಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಬಳಿಕ ಸ್ಥಳದಲ್ಲೇ ಕಾರನ್ನು ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಕಾರು ಹೈಕೋರ್ಟ್ ವಕೀಲರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ತೈವಾನ್ ಸೀಬೆ ಬೆಳೆದು ಲಕ್ಷಾದೀಶನಾದ ಕೋಲಾರದ ರೈತ
Advertisement
Advertisement
ಸ್ಥಳಕ್ಕೆ ಬನಶಂಕರಿ ಸಂಚಾರಿ ಪೊಲೀಸರು ಹಾಗೂ ಹೊಯ್ಸಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಸ್ಥಳದಿಂದ ಕಾರನ್ನು ತರುವಂತೆ ಚಾಲಕ ತನ್ನ ಸ್ನೇಹಿತರನ್ನು ಕಳಿಸಿದ್ದನಂತೆ.