ಕಾರು ಆಕ್ಸಿಡೆಂಟ್: ನಿಶ್ಚಿತಾರ್ಥ ದಿನವೇ ಖ್ಯಾತ ಖಳನಟ ನಿಧನ

Public TV
1 Min Read
Suraj Mehr 2

ಸಿನಿಮಾ ಶೂಟಿಂಗ್ ಮುಗಿಸಿಕೊಂಡು ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಛತ್ತೀಸ್ ಗಢದ ಖ್ಯಾತ ಖಳನಟ (Villain) ಸೂರಜ್ ಮೆಹರ್ (Suraj Mehr) ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 40ರ ವಯಸ್ಸಿನ ನಟ ಅಖ್ರಿ ಫೈಸ್ಲಾ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬರುವಾಗ ಈ ಅವಘಡ ನಡೆದಿದೆ.

Suraj Mehr 1

ಛತ್ತೀಸಗಢ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟರಾಗಿದ ಸೂರಜ್, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಬುಧವಾರ ಅವರ ಎಂಗೇಜ್ ಮೆಂಟ್ ಆಗಬೇಕಿತ್ತು. ಆದರೆ, ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ.

 

ನಟನು ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿರುವ ಪರಿಣಾಮ, ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು. ಹಾಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನೋರ್ವರಿಗೂ ಗಂಭೀರ ಗಾಯಗಳು ಆಗಿವೆಯಂತೆ.

Share This Article